ಭೂ ಹಿಡುವಳಿ ಮಿತಿ ತಗ್ಗಿಸಲು ಪ್ರಧಾನಿ ಸಲಹೆ ನವದೆಹಲಿ, ಸೆ. 26–ಜಮೀನಿನ ಉತ್ಪಾದನಾ ಸಾಮರ್ಥ್ಯ ಹೆಚ್ಚಿ, ವ್ಯವಸಾಯದಿಂದ ಆದಾಯ ಹೆಚ್ಚುತ್ತಿರುವುದರಿಂದ ಭೂ ಹಿಡುವಳಿ ಮಿತಿಯನ್ನು ತಗ್ಗಿಸಬೇಕೆಂದು ಪ್ರಧಾನಿ ಇಂದಿರಾ ಗಾಂಧಿಯವರು ಇಂದು ಇಲ್ಲಿ ಹೇಳಿದರು.
ಭೂಸುಧಾರಣೆಗಳ ಬಗ್ಗೆ ಮುಖ್ಯಮಂತ್ರಿಗಳ ಸಮ್ಮೇಳವನ್ನು ಉದ್ಘಾಟಿಸಿದ ಪ್ರಧಾನಿಯವರು ಭೂಸುಧಾರಣೆಗಳನ್ನು ಜಾರಿಗೆ ತರುವಲ್ಲಿ ಇರುವ ‘ರಾಷ್ಟ್ರೀಯ ಜರೂರು’ ತಿಳಿಸಿದರು.
ಹತ್ತು ತಿಂಗಳ ಹಿಂದೆ ನಡೆದ ಸಮ್ಮೇಳನದಲ್ಲಿ ಕೈಗೊಂಡ ನಿರ್ಧಾರಗಳನ್ನು ಜಾರಿಗೆ ತರುವಲ್ಲಿ ವಿಳಂಬಗತಿಯ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದರು.