ಅಕ್ಕಿ–ಗೋಧಿ: ಸಗಟು ವ್ಯಾಪಾರದ ವಹಿವಾಟು ಅರಿಯಲು 2 ಸಮಿತಿ ನೇಮಕ

ನವದೆಹಲಿ, ಜ. 12– ಗೋಧಿ ಮತ್ತು ಅಕ್ಕಿಯ ಸಗಟು ವ್ಯಾಪಾರವನ್ನು ಈ ವರ್ಷ ವಹಿಸಿಕೊಳ್ಳುವ ಬಗ್ಗೆ ಎಲ್ಲಾ ಅಂಶಗಳನ್ನೂ ಪರಿಶೀಲಿಸಿ ವಿವರವಾದ ವರದಿಯನ್ನು ತಯಾರಿಸುವ ಸಲುವಾಗಿ ಕೇಂದ್ರ ಸರ್ಕಾರವು ಎರಡು ಸಮಿತಿಗಳನ್ನು ರಚಿಸಿದೆ. ಫೆಬ್ರುವರಿ ಮೊದಲ ವಾರದಲ್ಲಿ ವರದಿ ಸಲ್ಲಿಸಬೇಕೆಂದು ಈ ಎರಡು ಸಮಿತಿಗಳನ್ನು ಕೇಳಲಾಗಿದೆ.

ಹಣಕಾಸು ಇಲಾಖೆಯ ಅಧಿಕಾರಿಯೊಬ್ಬರ ನೇತೃತ್ವದಲ್ಲಿ ರಚಿಸಲಾದ ಒಂದು ಸಮಿತಿಯಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳ ಪ್ರತಿನಿಧಿಗಳು ಇದ್ದಾರೆ. ಸಗಟು ವ್ಯಾಪಾರಕ್ಕೆ ಬೇಕಾಗುವ ಹಣಕಾಸು ವ್ಯವಸ್ಥೆ ಬಗ್ಗೆ ಈ ಸಮಿತಿ ಪರಿಶೀಲಿಸುತ್ತದೆ. ಮತ್ತೊಂದು ಸಮತಿಯು ಆಡಳಿತ ಸಮಸ್ಯೆಗಳ ಬಗ್ಗೆ ಪರಿಶೀಲಿಸುತ್ತದೆ.

ಅಭಾವ ಪ್ರದೇಶಗಳ ವಿಶೇಷ ಆಯೋಗ ರಚನೆಗೆ ಒತ್ತಾಯ
ನವದೆಹಲಿ, ಜ. 12– ಅಭಾವಕ್ಕೆ ಪದೇ ಪದೇ ತುತ್ತಾಗುವ ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗಾಗಿ ವಿಶೇಷ ಆಯೋಗವನ್ನು ರಚಿಸಲು, ಇಲ್ಲವೇ ಆ ಪ್ರದೇಶದ ಸಮಸ್ಯೆ ನಿವಾರಣೆ ಬಗ್ಗೆ ವರದಿ ಸಲ್ಲಿಸುವಂತೆ ರಾಷ್ಟ್ರೀಯ ಕೃಷಿ ಆಯೋಗವನ್ನು ಕೋರುವಂತೆ ಎಐಸಿಸಿಯ ಕಿಸಾನ್‌ಸೆಲ್ (ಕೃಷಿಕರ ವಿಭಾಗ) ಕೇಂದ್ರ ಸರ್ಕಾರವನ್ನು ಒತ್ತಾಯಪಡಿಸಿದೆ.

ಬೇರೆ ಬೇರೆ ಹಿಂದುಳಿದ ಪ್ರದೇಶಗಳ ಅಭಿವೃದ್ಧಿಯಲ್ಲಿ ಆಗುತ್ತಿರುವ ವ್ಯತ್ಯಾಸಗಳನ್ನು ಕಡಿಮೆ ಮಾಡುವುದಕ್ಕಾಗಿ ಕೇಂದ್ರ ಮತ್ತು ರಾಜ್ಯಗಳಲ್ಲಿ ವಿಶೇಷ ಇಲಾಖೆಗಳನ್ನು ಸ್ಥಾಪಿಸಬೇಕೆಂದೂ ಕಿಸಾನ್‌ಸೆಲ್ ಸಲಹೆ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.