ಭಾನುವಾರ, ಜುಲೈ 25, 2021
22 °C

50 ವರ್ಷಗಳ ಹಿಂದೆ: ಶನಿವಾರ 10.7.1971

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೀರ್ತಿರಾಯ ಕುಲದೀಪಕನಿಗೆ ಅಭಿಮಾನಿಗಳಿಂದ ಅಂತಿಮ ಪ್ರಣಾಮ
ಬೆಂಗಳೂರು, ಜುಲೈ 9–
ಗೋವಿಂದ–ನಾರಾಯಣ–ಕೃಷ್ಣರ ನಾಮಸ್ಮರಣೆಯಲ್ಲಿ ಪೊಲೀಸ್ ಬ್ಯಾಂಡಿನ ಶೋಕಗೀತೆ ದುಃಖದಿಂದ ಬೆರೆಯುತ್ತಿತ್ತು. ನೆರೆದಿದ್ದವರ ಹೃದಯ ಮೀಟುತ್ತಿತ್ತು. ಕನ್ನಡ ನಾಡಿನ ಜನಮನವನ್ನಾಳಿದ ಮನೆಮನೆಯ, ಕಾದಂಬರಿ ಸಾರ್ವಭೌಮ ಅ.ನ.ಕೃ. ಅವರ ಪಾರ್ಥಿವ ಶರೀರವನ್ನು ವಿಲ್ಸನ್ ಗಾರ್ಡನ್ಸ್‌ನಲ್ಲಿರುವ ವಿದ್ಯುತ್ ಸ್ಮಶಾನದಲ್ಲಿ ದಹಿಸಲಾಯಿತು.

ಅ.ನ.ಕೃ. ನಿಧನಕ್ಕೆ ರಾಷ್ಟ್ರಕವಿ ಕುವೆಂಪು, ಸಾಹಿತಿ ಡಾ.ಡಿ.ವಿ. ಗುಂಡಪ್ಪ, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಬಿ. ಶಿವಮೂರ್ತಿ ಶಾಸ್ತ್ರಿ, ವಿಮರ್ಶಕ ವಿ. ಸೀತಾರಾಮಯ್ಯ, ರಾಜ್ಯಪಾಲ ಶ್ರೀ ಧರ್ಮವೀರ, ಗಣ್ಯರಾದ ಪು.ತಿ.ನ,  ಜಿ.ಪಿ. ರಾಜರತ್ನಂ, ತಿ.ತಾ. ಶರ್ಮ, ಬಿ. ಪುಟ್ಟಸ್ವಾಮಯ್ಯ, ಕೆ.ಎಸ್‌. ನರಸಿಂಹಸ್ವಾಮಿ, ಜಿ. ವೆಂಕಟಸುಬ್ಬಯ್ಯ, ಜಿ. ನಾರಾಯಣ, ಕಡಿದಾಳ್ ಮಂಜಪ್ಪ, ಮತ್ತಿತರರು ಸಂತಾಪ ವ್ಯಕ್ತಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು