ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ: ಬುಧವಾರ 30-8-1972

Last Updated 29 ಆಗಸ್ಟ್ 2022, 19:30 IST
ಅಕ್ಷರ ಗಾತ್ರ

ಸೆ. 15ರ ವೇಳೆಗೆ ಉಭಯ ಸೇನಾ ಪಡೆಗಳ ವಾಪಸಾತಿ

ನವದೆಹಲಿ, ಆ. 29– ಉಪಖಂಡದಲ್ಲಿ ಸುಭದ್ರ ಶಾಂತಿ ಸ್ಥಾಪನೆಗಾಗಿ ಸಿಮ್ಲಾ ಒಪ್ಪಂದ ವನ್ನು ಅಕ್ಷರಶಃ ಹಾಗೂ ಮನಸಾ ಕಾರ್ಯಗತಗೊಳಿಸುವ ತಮ್ಮ ಸಂಕಲ್ಪವನ್ನು ಭಾರತ ಮತ್ತು ಪಾಕಿಸ್ತಾನಗಳು ಇಂದು ಪುನರುಚ್ಚರಿಸಿವೆ.

ಉಭಯ ರಾಷ್ಟ್ರಗಳ ನಡುವಿನ ಸಂದೇಹ ಗಳನ್ನು ಬಗೆಹರಿಸಿ ಒಪ್ಪಂದ ಅನುಷ್ಠಾನಗೊಳ್ಳುವಂತೆ ಮಾಡಲು ಅಧಿಕಾರಿಗಳು ಮಾತುಕತೆ ನಡೆಸಿದ ಬಳಿಕ ಇಂದು ನೀಡಿರುವ ಹೇಳಿಕೆಯಲ್ಲಿ ಈ ಸಂಕಲ್ಪ ವ್ಯಕ್ತಪಡಿಸಿದ್ದಾರೆ.

1971ರ ಡಿ. 17ರಂದು ಜಾರಿಗೆ ಬಂದ ಕದನವಿರಾಮವನ್ನು ಮಾನ್ಯಮಾಡಿದ್ದು, ಅದು ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕೆಂದು ತಮ್ಮ ತಮ್ಮ ಸರ್ಕಾರಗಳಿಗೆ ಶಿಫಾರಸು ಮಾಡಬೇಕೆಂಬುದು ಎರಡೂ ನಿಯೋಗಗಳು ತೆಗೆದುಕೊಂಡ ಇನ್ನೊಂದು ಮುಖ್ಯ ನಿರ್ಧಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT