ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುಧವಾರ, 11–2–1970

Last Updated 10 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ಬ್ಯಾಂಕ್‌ ರಾಷ್ಟ್ರೀಕರಣ ಶಾಸನ ರದ್ದು: ಸುಪ್ರೀಂ ಕೋರ್ಟ್‌ ತೀರ್ಪು

ನವದೆಹಲಿ, ಫೆ. 10: ರಾಷ್ಟ್ರದ ಹದಿನಾಲ್ಕು ಭಾರಿ ವಾಣಿಜ್ಯ ಬ್ಯಾಂಕುಗಳನ್ನು ಕಳೆದ ವರ್ಷ ರಾಷ್ಟ್ರೀಕರಣ ಮಾಡಿದ ಶಾಸನವನ್ನು ಸುಪ್ರೀಂ ಕೋರ್ಟ್‌ ಇಂದು ರದ್ದು ಮಾಡಿತು.

ನ್ಯಾಯದ ದೃಷ್ಟಿಯಲ್ಲಿ ಸಮಾನತೆ ಮತ್ತು ಕೆಲವು ಮೂಲಭೂತ ಹಕ್ಕುಗಳ ಭರವಸೆ ನೀಡಿರುವ ಸಂವಿಧಾನದ 14, 19 ಮತ್ತು 31 (2)ನೆ ವಿಧಿಗಳನ್ನು ಉಲ್ಲಂಘಿಸುವ ಕಾರಣ ಹದಿನಾಲ್ಕು ವಾಣಿಜ್ಯ ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸಿರುವ ಇಡೀ ಶಾಸನ ಅಸಿಂಧು ಎಂದು ಸುಪ್ರೀಂ ಕೋರ್ಟ್‌ ಇಂದು ಘೋಷಿಸಿತು.

ವಿದೇಶಿ ಬ್ಯಾಂಕುಗಳು ಮತ್ತು ಅನೇಕ ಭಾರತೀಯ ಬ್ಯಾಂಕುಗಳು ಬ್ಯಾಂಕಿಂಗ್‌ ಉದ್ಯಮವನ್ನು ಮುಂದುವರಿಸಿಕೊಂಡು ಹೋಗಲು ಅವಕಾಶ ನೀಡಿ 14 ಬ್ಯಾಂಕುಗ
ಳನ್ನು ಮಾತ್ರ ರಾಷ್ಟ್ರೀಕರಣಗೊಳಿಸಿರುವುದರಿಂದ ತೀವ್ರ ಪಕ್ಷಪಾತ ಮಾಡಿದಂತಾಗಿದೆಯೆಂದು ತೀರ್ಪಿನಲ್ಲಿ ತಿಳಿಸಲಾಗಿದೆ.

ರಾಜಕೀಯ ಸಂತ್ರಸ್ತರಿಗೆವಿಶ್ರಾಂತಿ ವೇತನ

ಬೆಂಗಳೂರು, ಫೆ. 10: ಭಾರತದ ಸ್ವಾತಂತ್ರ್ಯ ಸಮರದಲ್ಲಿ ನೊಂದ ರಾಜ್ಯದ ಸುಮಾರು 2,300 ರಾಜಕೀಯ ಸಂತ್ರಸ್ತರಿಗೆ ರಾಜ್ಯ ಸರ್ಕಾರ ಇಲ್ಲಿಯವರೆಗೆ ರಾಜಕೀಯ ವಿಶ್ರಾಂತಿ ವೇತನವನ್ನು ನೀಡಿದೆ. ವಿಶ್ರಾಂತಿ ವೇತನ ತಿಂಗಳಿಗೆ 50 ರೂಪಾಯಿ.

ಸಿ.ಬಿ.ಗುಪ್ತ ರಾಜೀನಾಮೆ

ಲಖನೌ, ಫೆ. 10: ಉತ್ತರ ಪ್ರದೇಶದ ಮುಖ್ಯಮಂತ್ರಿ ಚಂದ್ರಭಾನುಗುಪ್ತ ಅವರು ಇಂದು ರಾಜ್ಯಪಾಲ ಬಿ.ಗೋಪಾಲರೆಡ್ಡಿಅವರಿಗೆ ರಾಜೀನಾಮೆ ಸಲ್ಲಿಸಿದರು. ಭಾರತೀಯ ಕ್ರಾಂತಿದಳದ ನಾಯಕ ಚರಣ್‌
ಸಿಂಗ್‌ ಅವರನ್ನು ತಮ್ಮ ಸ್ಥಾನದಲ್ಲಿ ಮುಖ್ಯಮಂತ್ರಿಯಾಗಿ ನೇಮಿಸುವಂತೆ ಗುಪ್ತ ಅವರು ರಾಜ್ಯಪಾಲರಿಗೆ ಶಿಫಾರಸು ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT