ಶನಿವಾರ, ಡಿಸೆಂಬರ್ 5, 2020
25 °C

ಪ್ರಜಾವಾಣಿ 50 ವರ್ಷಗಳ ಹಿಂದೆ: ಶುಕ್ರವಾರ, 13–11–1970

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಂಸತ್ತಿಗೆ ಮಹಾಜನ್‌ ವರದಿ; ರಾಜ್ಯ ಎಂ.ಪಿಗಳ ಟೀಕೆ

ನವದೆಹಲಿ, ನ. 12– ಆಡಳಿತ ಕಾಂಗ್ರೆಸ್ಸಿಗೆ ಸೇರದ ಸಂಸತ್ತಿನ ಮೈಸೂರು ಎಂ.ಪಿಗಳು ಇಂದು ಹೇಳಿಕೆಯೊಂದನ್ನು ನೀಡಿ, ಮಹಾಜನ್‌ ಆಯೋಗದ ವರದಿಯ ಬಗೆಗೆ ಸಂಸತ್ತಿನ ಬಿಚ್ಚು ಅಭಿಪ್ರಾಯ ಪಡೆಯಬೇಕೆಂಬ ರಾಜ್ಯದ ಆಡಳಿತ ಕಾಂಗ್ರೆಸ್‌ ಸಂಸತ್‌ ಸದಸ್ಯರ ಸಲಹೆಯನ್ನು ಖಂಡಿಸಿದ್ದಾರೆ.

ಈ ಹೇಳಿಕೆಗೆ ಸಂಸ್ಥಾ ಕಾಂಗ್ರೆಸ್‌, ಸ್ವತಂತ್ರ ಪಕ್ಷ ಮತ್ತು ಪಕ್ಷೇತರ ಎಂ.ಪಿಗಳು ಸಹಿ ಹಾಕಿದ್ದಾರೆ.

ಶ್ರೀ ಡಿ. ದೇವರಾಜ ಅರಸ್‌ರವರ ನಾಯಕತ್ವದಲ್ಲಿ ಆಡಳಿತ ಕಾಂಗ್ರೆಸ್‌ ನಿಯೋಗವೊಂದು ಪ್ರತ್ಯೇಕವಾಗಿ ಪ್ರಧಾನಿಯನ್ನು ಭೇಟಿ ಮಾಡಿದ್ದಕ್ಕೂ ಈ ಹೇಳಿಕೆಯಲ್ಲಿ ಆಕ್ಷೇಪಿಸಲಾಗಿದೆ.

ರಾಜ್ಯ ಸಚಿವರ ಫೋನ್‌ ಅಕ್ರಮ ಬಳಕೆ ಶಂಕೆ

ನವದೆಹಲಿ, ನ. 12– ಮೈಸೂರು ಸರ್ಕಾರದ ಕೆಲವು ಸಚಿವರ ಖಾಸಗಿ ಟೆಲಿಫೋನ್‌ಗಳ ಅಕ್ರಮ ಬಳಕೆಯಾಗುತ್ತಿದೆ

ಎಂದು ಅನುಮಾನಿಸಲಾಗಿದ್ದು ಇದನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿರುವುದಾಗಿ ವಾರ್ತಾ, ಪ್ರಸಾರ ಮತ್ತು ಸಂಪರ್ಕ ಶಾಖೆ ಸಚಿವ ಶ್ರೀ ಸತ್ಯನಾರಾಯಣ ಸಿನ್ಹಾ ಅವರು ಇಂದು ಲೋಕಸಭೆಯಲ್ಲಿ ಶ್ರೀ ನಂಬಿಯಾರ್‌ರವರಿಗೆ ಲಿಖಿತ ಉತ್ತರವೊಂದರಲ್ಲಿ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು