ಮಂಗಳವಾರ, ಜನವರಿ 19, 2021
27 °C

ಪ್ರಜಾವಾಣಿ 50 ವರ್ಷಗಳ ಹಿಂದೆ | ಮಂಗಳವಾರ, 5–1–1971

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೃಷ್ಟಿವೈಶಾಲ್ಯಕ್ಕೆ ನ್ಯಾಯಾಧೀಶರಿಗೆ ರಾಷ್ಟ್ರಪತಿ ಕರೆ

ನವದೆಹಲಿ, ಜ. 4– ನ್ಯಾಯಾಧೀಶರು ಕಾನೂನು ವಿಷಯ ಕುರಿತು ನೀಡುವ ತಮ್ಮ ತೀರ್ಪುಗಳಲ್ಲಿ ಅಮೆರಿಕದ ನ್ಯಾಯಧೀಶರೊಬ್ಬರು ವಿವರಿಸಿರುವಂತೆ ‘ದೃಷ್ಟಿವೈಶಾಲ್ಯ ಹಾಗೂ ಮನೋಭಾವದಲ್ಲಿ ರೂಢಿ ಮೂಲವಾಗಿದ್ದು, ಶಿಸ್ತಿನಿಂದ ಬಲಗೊಂಡಿರುವಂಥ ಅಜೇಯ ಅನಾಸಕ್ತಿ’ ಪ್ರದರ್ಶಿಸುವವರೆಂಬ ಆಶಯವನ್ನು ರಾಷ್ಟ್ರಪತಿ ವಿ.ವಿ.ಗಿರಿ ಅವರು ಇಂದು ವ್ಯಕ್ತಪಡಿಸಿದರು.

ಕಾಮನ್‌ವೆಲ್ತ್‌ ರಾಷ್ಟ್ರಗಳ ಶ್ರೇಷ್ಠ ನ್ಯಾಯಾಧೀಶರುಗಳ ಮೂರನೇ ಸಮ್ಮೇಳನ ಉದ್ಘಾಟಿಸಿದ ಗಿರಿ ಅವರು, ‘ಜಡ ಗ್ರಂಥವಾಗಿ ಉಳಿದಿರಬೇಕೆಂಬ ಉದ್ದೇಶದಿಂದ ಸಂವಿಧಾನ ರಚಿಸುವುದಿಲ್ಲ‘ ಎಂದರು.

ಚುನಾವಣೆಗಾಗಿ ಅಧಿಕಾರ ದುರುಪಯೋಗ ವಿರುದ್ಧ ರಾಷ್ಟ್ರಪತಿ ಕ್ರಮಕ್ಕೆ ಆಗ್ರಹ

ನವದೆಹಲಿ, ಜ. 4– ಲೋಕಸಭೆಗೆ ನಡೆಯುವ ಮಧ್ಯಕಾಲೀನ ಚುನಾವಣೆಗಳಲ್ಲಿ ಸರ್ಕಾರವು ಅಧಿಕಾರ ದುರುಪಯೋಗಪಡಿಸಿಕೊಳ್ಳದಂತೆ ತುರ್ತುಕ್ರಮ ತೆಗೆದುಕೊಳ್ಳಬೇಕೆಂದು ಸಂಸ್ಥಾ ಕಾಂಗ್ರೆಸ್‌, ಜನಸಂಘ, ಎಸ್‌.ಎಸ್‌.ಪಿ ಮತ್ತು ಸ್ವತಂತ್ರ ಪಕ್ಷದ ನಾಯಕರು ಇಂದು ರಾಷ್ಟ್ರಪತಿ ಶ್ರೀ ವಿ.ವಿ.ಗಿರಿ ಅವರನ್ನು ಭೇಟಿ ಮಾಡಿ ಒತ್ತಾಯ ಹಾಕಿದರು.

ರಾಷ್ಟ್ರಪತಿಗೆ ಸಲ್ಲಿಸಿದ ಮನವಿ ಪತ್ರವೊಂದರಲ್ಲಿ ಅವರು, ಸರ್ಕಾರದ ಚಟುವಟಿಕೆಗಳನ್ನು ಪರಿಶೀಲಿಸಿ ಹತೋಟಿಯಲ್ಲಿಡಲು ಶೀಘ್ರದಲ್ಲೇ ರಾಜ್ಯಸಭೆಯನ್ನು ಕರೆಯಬೇಕೆಂದು ಕೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು