ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ: ಶನಿವಾರ, 20–09–1997

Last Updated 19 ಸೆಪ್ಟೆಂಬರ್ 2022, 17:17 IST
ಅಕ್ಷರ ಗಾತ್ರ

ಚರ್ಚೆ ವಿಫಲ: ಭಾರತ– ಪಾಕ್‌ ಪ್ರತ್ಯಾರೋಪ

ಇಸ್ಲಾಮಾಬಾದ್‌, ಸೆ. 19 (ಪಿಟಿಐ)– ಭಾರತ ಮತ್ತು ಪಾಕಿಸ್ತಾನದ ನಡುವಿನ ಮೂರನೇ ಸುತ್ತಿನ ಮಾತುಕತೆಯ ವೈಫಲ್ಯಕ್ಕೆ ಉಭಯ ರಾಷ್ಟ್ರಗಳು ಪರಸ್ಪರ ರಾಷ್ಟ್ರಗಳ ವಿರುದ್ಧ ದೂಷಣೆ ಮಾಡುವುದರೊಂದಿಗೆ ಉಭಯ ದೇಶಗಳ ನಡುವಣ ಸಂಬಂಧ ಸುಧಾರಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಪ್ರಯತ್ನಕ್ಕೆ ತೀವ್ರ ಹಿನ್ನಡೆ ಉಂಟಾಗಿದೆ. ಈ ಬೆಳವಣಿಗೆ ಗುಜ್ರಾಲ್‌– ಷರೀಫ್‌ ಮಾತುಕತೆಯ ಮೇಲೆ ಪರಿಣಾಮ ಬೀರುವುದೇ ಎಂದು ಕಾದುನೋಡಬೇಕಿದೆ.

‘ಭಾರತ ಮತ್ತು ಪಾಕಿಸ್ತಾನದ ವಿದೇಶಾಂಗ ಕಾರ್ಯದರ್ಶಿ ಮಟ್ಟದ ಮೂರನೇ ಸುತ್ತಿನ ಮಾತುಕತೆ ವಿಫಲವಾಗಲು ಭಾರತದ ಹಟಮಾರಿತನವೇ ಕಾರಣ’ ಎಂಬ ಪಾಕ್‌ ಟೀಕೆಯನ್ನು ಭಾರತ ತಿರಸ್ಕರಿಸಿದೆ.

‘ಉಭಯ ದೇಶಗಳ ಸಂಬಂಧ ಸುಧಾರಣೆಯಾಗಬೇಕು ಎಂಬ ಭಾರತದ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಪಾಕಿಸ್ತಾನದ ಜೊತೆ ಉತ್ತಮ ಸಂಬಂಧ ಹಾಗೂ ಸಹಕಾರಕ್ಕಾಗಿ ಭಾರತ ಎದುರು ನೋಡುತ್ತಿದೆ’ ಎಂದು ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರರು ಸ್ಪಷ್ಟಪಡಿಸಿದ್ದಾರೆ.

ಗರ್ಭಿಣಿಯಾಗಿದ್ದ ಡಯಾನಾ

ವಾಷಿಂಗ್ಟನ್‌, ಸೆ. 19 (ಎಎಫ್‌ಪಿ)– ಪ್ಯಾರಿಸ್‌ನಲ್ಲಿ ಕಾರು ಅಪಘಾತದಲ್ಲಿ ನಿಧನರಾದ ಪ್ರಿನ್ಸಸ್‌ ಡಯಾನಾ ಅವರು ದುರಂತ ಸಂಭವಿಸಿದ ಸಂದರ್ಭದಲ್ಲಿ ಆರು ವಾರಗಳ ಗರ್ಭಿಣಿ ಆಗಿದ್ದರು ಎಂದು ‘ಟೈಮ್‌’ ನಿಯತಕಾಲಿಕೆ ಪ್ರಕಟಿಸಿದೆ.

‘ತಾನು ಆರು ವಾರಗಳ ಗರ್ಭಿಣಿ’ ಎಂದು ಜತೆಗಿದ್ದ ಸಹಾಯಕನೊಬ್ಬನಿಗೆ ಅಪಘಾತದ ನಂತರ ಅರೆಪ್ರಜ್ಞೆಯಲ್ಲಿದ್ದ ಡಯಾನಾ ತಿಳಿಸಿದ್ದರು ಎಂದು ತುರ್ತು ಸೇವಾ ವೈದ್ಯರೊಬ್ಬರು ನಿಯತಕಾಲಿಕೆಗೆ
ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT