ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ 25 ವರ್ಷಗಳ ಹಿಂದೆ| ಭಾನುವಾರ, 22 ಜೂನ್‌, 1997

Last Updated 21 ಜೂನ್ 2022, 19:30 IST
ಅಕ್ಷರ ಗಾತ್ರ

ಮೇವು ಹ‌ಗರಣ: ಲಾಲು ಮನೆಯ ಮೇಲೆ ಸಿಬಿಐ ಹಠಾತ್‌ ದಾಳಿ

ಪಟ್ನಾ, ಜೂ. 21 (ಪಿಟಿಐ) – ಮೇವು ಹಗರಣದ ಆರೋಪಿ ಮುಖ್ಯಮಂತ್ರಿ ಲಾಲೂ ಪ್ರಸಾದ್‌ ಯಾದವ್‌ ಹಾಗೂ ಅವರ ಬಂಧುಗಳ ಮನೆಗಳ ಮೇಲೆ ಇಂದು ಸಿಬಿಐ ಅಧಿಕಾರಿಗಳು ದಾಳಿ ನಡೆಸಿದರು.

ಗೋಪಾಲ್‌ಗಂಜ್‌ ಜಿಲ್ಲೆಯ ಪೂಲ್‌ವಾರಿ ಹಳ್ಳಿಯಲ್ಲಿರುವ ತಮ್ಮ ಮನೆಯ ಮೇಲೆ ದಾಳಿ ನಡೆದಿದೆ ಎಂಬುದನ್ನು ಸ್ವತಃ ಲಾಲೂ ಪ್ರಸಾದ್‌ ದೃಢಪಡಿಸಿದ್ದಾರೆ.

ಕೈ’ ಬಲಪಡಿಸುವ ಬದಲು ಕಿತ್ತಾಟವೇ ಹೆಚ್ಚು

ಬೆಂಗಳೂರು, ಜೂನ್‌ 21 – ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷರ ಚುನಾವಣೆಯು ನ್ಯಾಯಾಲಯದ ಮಧ್ಯಪ್ರವೇಶದಿಂದಾಗಿ ಮುಂದೆ ಹೋದಂತೆಲ್ಲಾ ಪಕ್ಷದೊಳಗಿನ ಒಳಜಗಳ, ಗುಂಪುಗಾರಿಕೆ, ಅಧಿಕಾರಕ್ಕಾಗಿ ಕಿತ್ತಾಡುವ ಕಾಂಗ್ರೆಸ್ಸಿಗರ ಹಳೇ ಚಾಳಿ ಮತ್ತೆ ಮರುಕಳಿಸಿದೆ.

ರಾಜ್ಯದಲ್ಲಿ ಇತ್ತೀಚೆಗೆ ವಿಧಾನಸಭೆಯ ಕೆಲವು ಉಪಚುನಾವಣೆ ಹಾಗೂ ಎಪಿಎಂಸಿ ಚುನಾವಣೆಗಳಲ್ಲಿ ಪಕ್ಷ ಚಿಗುರಿರುವ ಸುಳಿವು ಅರಿತ ರಾಜ್ಯ ನಾಯಕರು ನೆಪ ಮಾತ್ರಕ್ಕೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಹೋರಾಟ
ನಡೆಸುತ್ತಿದ್ದಾರೆ. ಇನ್ನು ಆರು ತಿಂಗಳಲ್ಲಿ ಲೋಕಸಭಾ ಚುನಾವಣೆ ಬರಲಿದೆ. ರಾಜ್ಯದಲ್ಲಂತೂ ತಮ್ಮ ಪಕ್ಷ ಹೆಚ್ಚು ಸ್ಥಾನ ಗಳಿಸುವುದು ನಿಶ್ಚಿತ. ನಂತರ ರಾಜ್ಯ ವಿಧಾನಸಭೆಗೂ ಚುನಾವಣೆ ನಡೆಯುವ ಸಾಧ್ಯತೆಯನ್ನು ತಳ್ಳಿ‍ಹಾಕುವಂತಿಲ್ಲ.

ಆದ್ದರಿಂದ ಈಗಲೇ ಅಧ್ಯಕ್ಷರಾದರೆ ಮುಖ್ಯಮಂತ್ರಿ ಸ್ಥಾನ ತಮಗೆ ಕಟ್ಟಿಟ್ಟ ಬುತ್ತಿಯೆಂಬ ದೂರದೃಷ್ಟಿಯ ಲೆಕ್ಕಾಚಾರ ಇದ್ದಂತಿದೆ. ಭವಿಷ್ಯದ ಮುಖ್ಯಮಂತ್ರಿ ಸ್ಥಾನದ ಮೇಲೆ ಎಲ್ಲರ ಕಣ್ಣು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT