ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ 25 ವರ್ಷಗಳ ಹಿಂದೆ| ಸೋಮವಾರ 29–12–1996

Last Updated 29 ಡಿಸೆಂಬರ್ 2021, 20:55 IST
ಅಕ್ಷರ ಗಾತ್ರ

ವಿಜಿಮನ್‌ರ ಹಳೆಯ ಸ್ನೇಹಿತರಿಗಾಗಿ ಶೋಧ

ಬೆಂಗಳೂರು, ಡಿ. 29– ಹೊಸ ವರ್ಷದ ದಿನ (ಜ.1) ನಗರಕ್ಕೆ ಆಗಮಿಸಲಿರುವ ಇಸ್ರೇಲಿನ ಅಧ್ಯಕ್ಷ ಎಜರ್‌ ವಿಜಿಮನ್ ಅವರ ಹಳೇ ಸ್ನೇಹಿತರ ಶೋಧ ಅವರ ವಿಶೇಷ ಸಿಬ್ಬಂದಿ ಮೂಲಕ ನಗರದಲ್ಲಿ ನಡೆದಿದೆ.

ಸಾಮಾನ್ಯವಾಗಿ ಉನ್ನತ ಹುದ್ದೆಗೆ ಏರಿದವರು ತಮ್ಮ ಹಿಂದಿನ ಸ್ನೇಹಿತರು, ಹಿತೈಷಿಗಳನ್ನು ಮರೆಯುವ ಇಂದಿನ ದಿನ
ಗಳಲ್ಲಿ ಇಸ್ರೇಲಿನ ಅಧ್ಯಕ್ಷರು ತಮ್ಮ ಅಪೂರ್ವ ಸ್ನೇಹಮಯಿ ವ್ಯಕ್ತಿತ್ವವನ್ನು ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಈ ಶೋಧ ನಡೆದಿದೆ.

ಭಾರತ ಭೇಟಿ ಕಾರ್ಯಕ್ರಮ ನಿಗದಿಯಾದ ನಂತರ, ಸುಮಾರು 50 ವರ್ಷಗಳ ಹಿಂದೆ ತಾವು ಬೆಂಗಳೂರಿನಲ್ಲಿದ್ದಾಗ ಜತೆಯಲ್ಲಿದ್ದ ಗೆಳೆಯರ ನೆನಪು ಎಜರ್‌ ಅವರನ್ನು ಕಾಡಿತು. ನೆನಪಿನಲ್ಲಿ ಕೆಲವರ ಹೆಸರುಗಳೊಂದಿಗೆ ತಮ್ಮ ವಿಶೇಷ ಪ್ರತಿನಿಧಿಯೊಬ್ಬರನ್ನು ಅವರು ಬೆಂಗಳೂರಿಗೆ ಕಳುಹಿಸಿದರು.

ನಗರಕ್ಕೆ ಆಗಮಿಸಿದ ಅವರ ಪ್ರತಿನಿಧಿ ಹಿಂದೆ ಎಜರ್‌ ಅವರು ತರಬೇತಿ ಪಡೆದ ಯಲಹಂಕದ ವೈಮಾನಿಕ ತರಬೇತಿ ಕೇಂದ್ರದ ಅಧಿಕಾರಿಗಳಿಗೆ ಅಧ್ಯಕ್ಷರ ಬಯಕೆಯನ್ನು ತಿಳಿಸಿದರು. ತರಬೇತಿ ಸಮಯದಲ್ಲಿನ ಗೆಳೆಯರನ್ನು ಭೇಟಿಯಾಗಿ ಅವರೊಂದಿಗೆ ಕೆಲಕಾಲ ಹಳೆಯ ನೆನಪುಗಳನ್ನು ಮೆಲುಕು ಹಾಕುವ ಬಯಕೆ ಅವರದ್ದಾಗಿದೆ. ಅದಕ್ಕಾಗಿ ಅವರ ವಿಳಾಸಗಳನ್ನು ಪತ್ತೆಹಚ್ಚಿ ಅವರನ್ನು ಆಹ್ವಾನಿಸುವಂತೆ ಎಜರ್ ಸೂಚಿಸಿದ್ದಾರೆ.

ಆದರೆ ಅವರ 50 ವರ್ಷದ ಹಿಂದಿನ ಗೆಳೆಯರು ಎಲ್ಲಿದ್ದಾರೆ. ಏನಾಗಿದ್ದಾರೆ ಎಂಬುದೇ ಹೆಚ್ಚಿನವರಿಗೆ ತಿಳಿದಿಲ್ಲ. ಅವರನ್ನು ಹುಡುಕುವುದೇ ಕಷ್ಟವಾಗಿದೆ ಎಂದು ಸಂಬಂಧಿಸಿದವರು ಹೇಳುತ್ತಾರೆ. ಹುಡುಕಾಟದ ಪ್ರಯತ್ನ ಸಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT