ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ| ಭಾನುವಾರ, 10–9–1972

Last Updated 9 ಸೆಪ್ಟೆಂಬರ್ 2022, 19:31 IST
ಅಕ್ಷರ ಗಾತ್ರ

ಗೋಲನ್‌ ಬಳಿ ಇಸ್ರೇಲಿ ಸ್ಥಾನದ ಮೇಲೆ ಹಲ್ಲೆ: ಪ್ರತೀಕಾರ ದಾಳಿಯಲ್ಲಿ ಸಿರಿಯಾದ ಮೂರು ವಿಮಾನಗಳು ಧ್ವಂಸ

ಟೆಲ್‌ಅವಿವ್‌, ಸೆ. 9– ಗೋಲನ್‌ ಪರ್ವತ ಪ್ರದೇಶದಲ್ಲಿ ಇಂದು ಇಸ್ರೇಲ್‌ ಮತ್ತು ಸಿರಿಯಾ ನಡುವೆ ನಡೆದ ಉಗ್ರ ವಿಮಾನ ಕಾಳಗದಲ್ಲಿ ಸಿರಿಯಾಕ್ಕೆ ಅಪಾರ ಹಾನಿ ಉಂಟಾಗಿದೆ. ಗೋಲನ್‌ ಪರ್ವತ ಪ್ರದೇಶದಲ್ಲಿನ ತನ್ನ ಸೈನಿಕ ನೆಲೆಗಳ ಮೇಲೆ ದಾಳಿ ನಡೆಸಲೆತ್ನಿಸಿದ ಮೂರು ಸಿರಿಯನ್‌ ವಿಮಾನಗಳನ್ನು ಹೊಡೆದುರುಳಿ
ಸಲಾಯಿತೆಂದು ಇಸ್ರೇಲಿನ ಮಿಲಿಟರಿ ವಕ್ತಾರರು ಇಂದು ಇಲ್ಲಿ ತಿಳಿಸಿದರು.

ಸಿರಿಯಾದ ವಿಮಾನಗಳು ಇಸ್ರೇಲ್‌ ನೆಲೆಗಳಿಗೆ ಯಾವ ಹಾನಿಯನ್ನೂ ಉಂಟು ಮಾಡಿಲ್ಲ. ಇಸ್ರೇಲಿ ವಿಮಾನಗಳು ಸುರಕ್ಷಿತವಾಗಿ ನೆಲೆಗೆ ವಾಪಸಾದವೆಂದು ವಕ್ತಾರರು ಹೇಳಿದರು.

ಡಿವಿಜಿ ಅವರ ಸ್ಥಿತಿಯಲ್ಲಿ ಸುಧಾರಣೆ

ಬೆಂಗಳೂರು, ಸೆ. 9– ಲಘು ಹೃದಯಾಘಾತಕ್ಕೊಳಗಾಗಿ ನಿನ್ನೆ ಸೇಂಟ್‌ ಮಾರ್ಥಾ ಆಸ್ಪತ್ರೆಗೆ ಸೇರಿಸಲ್ಪಟ್ಟ ಡಾ.ಡಿ.ವಿ. ಗುಂಡಪ್ಪ ಅವರು ಚೇತರಿಸುತ್ತಿದ್ದು, ‘ಇದೀಗ ಕಳವಳಕ್ಕೆ ಏನೂ ಕಾರಣವಿಲ್ಲ’ ಎಂದು ವೈದ್ಯರು ತಿಳಿಸಿದರು.

ರಾಜ್ಯಪಾಲ ಶ್ರೀ ಎಂ.ಎಲ್‌. ಸುಖಾಡಿಯಾ ಅವರನ್ನು ಒಳಗೊಂಡು ಅನೇಕ ಮಂದಿ ಪ್ರಮುಖರು ಆಸ್ಪತ್ರೆಗೆ ಭೇಟಿ ನೀಡಿ, ಡಿವಿಜಿ ಅವರ ಆರೋಗ್ಯ ವಿಚಾರಿಸಿ, ಶೀಘ್ರ ಸುಖ ಹಾರೈಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT