ಗುರುವಾರ , ಅಕ್ಟೋಬರ್ 21, 2021
22 °C

50 ವರ್ಷಗಳ ಹಿಂದೆ| ಸೆಪ್ಟೆಂಬರ್‌ 19, 1971

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿದ್ಯಾರ್ಥಿಗಳ ಮುಷ್ಕರಕ್ಕೆ ಯಾವ ಕಾರಣವೂ ಇಲ್ಲ: ತುಕೋಳ್‌ ವಿವರಣೆ

ಬೆಂಗಳೂರು, ಸೆ.18– ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮುಷ್ಕರ ಹೂಡಲು ‘ಯಾವ ಕಾರಣವೂ’ ಇಲ್ಲವೆಂದು ಉಪಕುಲಪತಿ ಟಿ.ಕೆ.ತುಕೋಳ್‌ ಅವರು ಇಂದು ವರದಿಗಾರರಿಗೆ ತಿಳಿಸಿದರು.

ವಿದ್ಯಾರ್ಥಿ ನಾಯಕರು ತಿಳಿಸಿರುವ ‘ಕುಂದುಕೊರತೆಗಳಲ್ಲಿ’ ಬಹುಭಾಗ ವಿದ್ಯಾರ್ಥಿಗಳಿಗೆ ಸಂಬಂಧಪಟ್ಟವಲ್ಲವೆಂದು ಅಭಿಪ್ರಾಯಪಟ್ಟರು.

ಕೆಲ ದಿನಗಳ ಹಿಂದೆ ಕೆಲ ವಿದ್ಯಾರ್ಥಿ ನಾಯಕರು ತಮ್ಮನ್ನು ಭೇಟಿ ಮಾಡಿದಾಗ ‘ಕ್ಯಾರಿ ಓವರ್‌ ಪದ್ಧತಿ ಹಾಗೂ ನಾಲ್ಕು ಮಂದಿ ವಿದ್ಯಾರ್ಥಿಗಳ ಫಲಿತಾಂಶ ಬದಲಾವಣೆ ವಿಷಯಗಳನ್ನು ಮಾತ್ರ ಚರ್ಚಿಸಿದರು. ಕ್ಯಾರಿಓವರ್‌ ಪದ್ಧತಿಯನ್ನು ಮುಂದುವರಿಸುವುದಾಗಿ ತಿಳಿಸಿದೆ. ಫಲಿತಾಂಶ ಬದಲಾವಣೆಯಾದ ಬಗ್ಗೆ ಹಾಗೂ ಕಾರಣಗಳನ್ನು ವಿವರಿಸಿದೆ. ಎದ್ದು ಹೋಗುವ ಕಾಲದಲ್ಲಿ ಅಧ್ಯಾಪಕ ಶ್ರೀನಿವಾಸ್‌ ಎಂಬುವರ ವಿಷಯ ಪ್ರಸ್ತಾಪಿಸಿದರು. ಆ ಬಗ್ಗೆಯೂ ವಿವರಿಸಿದೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು