ಮಂಗಳವಾರ, ಅಕ್ಟೋಬರ್ 19, 2021
22 °C
50 ವರ್ಷಗಳ ಹಿಂದೆ ಶನಿವಾರ 02.10.1971

50 ವರ್ಷಗಳ ಹಿಂದೆ ಶನಿವಾರ 02.10.1971

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಂಸ್ಥಾ ಕಾಂಗ್ರೆಸ್ಸಿಗರಿಗೆ ‘ಸದಾಚಾರ ಸಂಹಿತೆ’

ನವದೆಹಲಿ, ಅ. 1– ಸೋಮವಾರ ಇಲ್ಲಿ ನಡೆಯುವ ಸಂಸ್ಥಾ ಕಾಂಗ್ರೆಸ್ಸಿನ ಕಾರ್ಯಕಾರಿ ಸಮಿತಿ ಸಭೆಯು ತನ್ನ ಸದಸ್ಯರಿಗಾಗಿ ‘ಸದಾಚಾರ ಸಂಹಿತೆ’ಯೊಂದನ್ನು ಸಿದ್ಧಪಡಿಸುವ ನಿರೀಕ್ಷೆಯಿದೆ.

ಡಾ. ರಾಮಸುಭಗ್‌ ಸಿಂಗ್ ಮತ್ತು ಶ್ರೀಮತಿ ತಾರಕೇಶ್ವರಿ ಸಿನ್ಹಾ ಅವರ ನೇತೃತ್ವದಲ್ಲಿಯ ಯುವಕರ ಗುಂಪು ಪಕ್ಷದ ಉನ್ನತ ನಾಯಕರನ್ನು ಬಹಿರಂಗವಾಗಿ ಟೀಕೆ ಮಾಡುತ್ತಿರುವುದರಿಂದ ಈ ಕ್ರಮ ಅಗತ್ಯವಾಗಿದೆ
ಎಂದು ಪಕ್ಷದ ವೃತ್ತಗಳು ತಿಳಿಸಿವೆ.

ಕುಂದುಕೊರತೆ ಅರಿಯಲು ದೆಹಲಿವರೆಗೆ ರೈಲಿನಲ್ಲಿ ಕೆಂಗಲ್‌ರ ಖುದ್ದು ಪ್ರವಾಸ

ಬೆಂಗಳೂರು, ಅ. 1– ರೈಲು ಪ್ರಯಾಣ ಹೆಚ್ಚು ಸುಖಕರವಾಗುವಂತೆ ಮಾಡಲು ರೈಲ್ವೆ ಸಚಿವ ಶ್ರೀ ಕೆ. ಹನುಮಂತಯ್ಯ ಅವರು ರಾಷ್ಟ್ರವ್ಯಾಪಿ ಚಳವಳಿಯೊಂದನ್ನು ಆರಂಭಿಸಿದ್ದಾರೆ.

ಈ ಉದ್ದೇಶವನ್ನು ಸಾಧಿಸಲು ಖುದ್ದಾಗಿ ಪರಿಸ್ಥಿತಿಯನ್ನು ಅರಿತುಕೊಳ್ಳುವುದಕ್ಕಾಗಿ ಸಚಿವರು ಇಂದು ರಾತ್ರಿ ಇಲ್ಲಿಂದ ರೈಲಿನಲ್ಲಿ ಮದ್ರಾಸ್ ಮಾರ್ಗವಾಗಿ ದೆಹಲಿಗೆ ಹೊರಟರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು