ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ: ಶನಿವಾರ, ಮೇ 27, 1972

Last Updated 26 ಮೇ 2022, 19:30 IST
ಅಕ್ಷರ ಗಾತ್ರ

ಅಣ್ವಸ್ತ್ರ ಪೈಪೋಟಿ ತಡೆ: ಐತಿಹಾಸಿಕ ಒಪ್ಪಂದಕ್ಕೆ ರಷ್ಯಾ– ಅಮೆರಿಕ ಸಹಿ
ಮಾಸ್ಕೋ, ಮೇ 26–
ಅಗ್ರ ರಾಷ್ಟ್ರಗಳು ಅಣ್ವಸ್ತ್ರ ಪೈಪೋಟಿ ನಡೆಸುವುದನ್ನು ತಡೆಗಟ್ಟಲು ಶಸ್ತ್ರಾಸ್ತ್ರ ಮಿತಿ ಕುರಿತ ಒಪ್ಪಂದಕ್ಕೆ ಅಮೆರಿಕ ಅಧ್ಯಕ್ಷ ನಿಕ್ಸನ್‌ ಮತ್ತು ರಷ್ಯಾ ಕಮ್ಯುನಿಸ್ಟ್ ಪಕ್ಷದ ನಾಯಕ ಬ್ರೆಜ್ನೇವ್ ಅವರು ಈ ರಾತ್ರಿ ಸಹಿ ಹಾಕಿದರು.

*

ಕಾಂಗ್ರೆಸ್‌ ಕಾರ್ಯಕ್ರಮ ಒಪ್ಪದಿದ್ದರೆಪಕ್ಷ ತ್ಯಜಿಸಿ: ಇಂದಿರಾ ಛೀಮಾರಿ
ನವದೆಹಲಿ, ಮೇ 26–
ಸರ್ಕಾರದ ಟೀಕೆಗಾರರನ್ನು ಇಂದು ಇಲ್ಲಿ ತರಾಟೆಗೆ ತೆಗೆದುಕೊಂಡ ಪ್ರಧಾನ ಮಂತ್ರಿ ಇಂದಿರಾ ಗಾಂಧಿಯವರು ಪಕ್ಷದ ಕಾರ್ಯಕ್ರಮ ಒಪ್ಪದೇ ಇರುವವರಿಗೆ ಕಾಂಗ್ರೆಸ್‌ ಬಿಟ್ಟು ಹೋಗಲು ಕರೆಕೊಟ್ಟರು.

ಸಂಸತ್ ಕಾಂಗ್ರೆಸ್ ‍ಪಕ್ಷದ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಪಕ್ಷದಲ್ಲಿನ ತೀವ್ರ ಸುಧಾರಣವಾದಿಗಳಿಗೂ ಛೀಮಾರಿ ಹಾಕದೆ ಬಿಡಲಿಲ್ಲ.

ಪಕ್ಷ ನೀಡಿರುವ ಭರವಸೆಗಳು ಹಾಗೂ ಸರ್ಕಾರದ ಸಾಧನೆಗಳ ನಡುವೆ ವ್ಯಾಪಕ ಅಂತರವಿದೆಯೆಂದು ಪದೇ ಪದೇ ಕೇಳಿ ಬರುತ್ತಿರುವ ದೂರನ್ನು ಪ್ರಸ್ತಾಪಿಸಿದ ಇಂದಿರಾಗಾಂಧಿಯವರು ಪಕ್ಷದ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರುವ ವಿಚಾರವನ್ನು ಚರ್ಚಿಸಬೇಕು– ಚರ್ಚಿಸಬಹುದು ಎಂದು ಹೇಳಿ. ಆದರೆ, ‘ಒತ್ತಡ ಹೇರುವ ಗುಂಪುಗಳನ್ನು ತಾವು ಸಹಿಸುವುದಿಲ್ಲವೆಂದು ತಿಳಿಸಿದರೆಂದು ಗೊತ್ತಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT