ಮಂಗಳವಾರ, ಮಾರ್ಚ್ 21, 2023
30 °C

ಪ್ರಜಾವಾಣಿಯಲ್ಲಿ 25 ವರ್ಷಗಳ ಹಿಂದೆ: ಗುರುವಾರ, 18–7–1996

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಜೆಂಟ್ರಿಕ್ಸ್‌ ಯೋಜನೆಗೆ ಅನುಮತಿ ನೀಡಿಲ್ಲ– ಪ್ರಧಾನಿ

ನವದೆಹಲಿ, ಜುಲೈ 17(ಪಿಟಿಐ)– ಕರ್ನಾಟಕದ ವಿವಾದಾತ್ಮಕ ಕೊಜೆಂಟ್ರಿಕ್ಸ್‌ ವಿದ್ಯುತ್‌ ಯೋಜನೆಗೆ ಕೇಂದ್ರ ಸರ್ಕಾರ ಇನ್ನೂ ಅನುಮತಿ ನೀಡಿಲ್ಲ. ರಾಜ್ಯ ಸರ್ಕಾರವು ವಿದ್ಯುತ್‌ ಖರೀದಿ ದರವನ್ನು ಇನ್ನೂ ನಿಗದಿಗೊಳಿಸಬೇಕಿದೆ ಎಂದು ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಇಂದು ಲೋಕಸಭೆಗೆ ತಿಳಿಸಿದರು. 

ಪ್ರಶ್ನೋತ್ತರ ವೇಳೆಯಲ್ಲಿ ಸಮತಾ ಪಕ್ಷದ ಸದಸ್ಯ ಜಾರ್ಜ್‌ ಫರ್ನಾಂಡೀಸ್‌ ಅವರು ಕೊಜೆಂಟ್ರಿಕ್ಸ್‌ ವಿದ್ಯುತ್‌ ಯೋಜನೆ ಕುರಿತು ಸ್ಪಷ್ಟನೆ ಕೋರಿದಾಗ ಮಧ್ಯ ಪ್ರವೇಶಿಸಿದ ಪ್ರಧಾನಿ, ಕೇಂದ್ರ ವಿದ್ಯುತ್‌ ಪ್ರಾಧಿಕಾರವು ಪರಿಶೀಲನೆ ನಡೆಸಿದ ನಂತರವೇ ಈ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು