ಭಾನುವಾರ, ಆಗಸ್ಟ್ 1, 2021
21 °C

ಪ್ರಜಾವಾಣಿಯಲ್ಲಿ 50 ವರ್ಷಗಳ ಹಿಂದೆ: ಭಾನುವಾರ, 18–7–1071

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಮಿಳುನಾಡಿನ ಹಿತರಕ್ಷಣೆ ಬಗ್ಗೆ ಕೇಂದ್ರದ ಆಸಕ್ತಿ: ನಂಜೇಗೌಡರ ಖಂಡನೆ

ಬೆಂಗಳೂರು, ಜುಲೈ 17– ರಾಜ್ಯದ ಕಾವೇರಿ ಯೋಜನೆಗಳಿಗೆ ಮಂಜೂರಾತಿ ನೀಡದಿರುವುದು, ಏನೇ ಆಗಲಿ ಎಲ್ಲ ಕಾಲಕ್ಕೂ ತಮಿಳುನಾಡಿನ ಹಿತವನ್ನು ರಕ್ಷಿಸಬೇಕೆಂಬ ಕೇಂದ್ರದ ಆಸಕ್ತಿಯನ್ನು ತೋರಿಸುವುದೆಂದು ವಿಸರ್ಜಿತ ವಿಧಾನ ಸಭೆಯ ಸದಸ್ಯ ಎಚ್‌.ಎನ್‌. ನಂಜೇಗೌಡರು ಕೇಂದ್ರದ ನೀರಾವರಿ ಸಚಿವ ಡಾ.ಕೆ.ಎಲ್‌.ರಾವ್‌ ಅವರಿಗೆ ತಮ್ಮ ಅಸಮಾಧಾನವನ್ನು ಸೂಚಿಸಿದ್ದಾರೆ. 

‘ಒಂದೇ ಅಳತೆ ಗೋಲು ಅನ್ವಯಿಸಿ’: ಕಾವೇರಿ ಯೋಜನೆಗಳಿಗೆ ಕೇಂದ್ರದ ಅನುಮತಿ ನೀಡಬೇಕೆಂದು ಒತ್ತಾಯ ಮಾಡಿ ಸಚಿವರಿಗೆ ಶ್ರೀಯುತರು ಬರೆದಿರುವ ಪತ್ರದಲ್ಲಿ ‘ಸಂಬಂಧಪಟ್ಟವರು 1924ರ ಒಪ್ಪಂದಕ್ಕೆ ಬದ್ಧರಾಗಬೇಕು ಎಂಬುದು ನಿಮ್ಮ ಆಸಕ್ತಿಯಾದರೆ, ಸಂಬಂಧಪಟ್ಟವರಿಗೆಲ್ಲ ಸಮಾನ ಅಳತೆ ಗೋಲನ್ನು ಅನ್ವಯಿಸಬೇಕು’ ಎಂದಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು