ಶೇ 50 ರಷ್ಟು ಮತದಾನ
ಮುಂಬೈ, ಫೆ. 16 - ಭಾರತದ ತೃತೀಯ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾನವು ಇಂದು ಪ್ರಥಮವಾಗಿ ಪಶ್ಚಿಮ ಬಂಗಾಳದಲ್ಲಿ ಆರಂಭವಾಯಿತು. ಸುಮಾರು ಶೇ 50 ರಷ್ಟು ಮತದಾರರು ಮತ ಚಲಾಯಿಸಿದರು. ಪಶ್ಚಿಮ ಬಂಗಾಳದ 44 ಅಸೆಂಬ್ಲಿ ಕ್ಷೇತ್ರಗಳಲ್ಲಿ ಹಾಗೂ 19 ಲೋಕ ಸಭಾ ಕ್ಷೇತ್ರಗಳಲ್ಲಿ ಇಂದು ಬೆಳಿಗ್ಗೆ ಮತದಾನ ಆರಂಭವಾಯಿತು.
ಮೆಟ್ರಿಕ್ ಆದ ಎಲ್ಲ ಗಿರಿಜನ ವಿದ್ಯಾರ್ಥಿಗಳಿಗೆ ಸ್ಕಾಲರ್ ಷಿಪ್
ಮದರಾಸು, ಫೆ. 16 - ಗಿರಿಜನ ವಿದ್ಯಾರ್ಥಿಗಳಿಗೆ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ತೇರ್ಗಡೆಯಾದ ಬಳಿಕ ಅರ್ಹತೆ ಅಥವ ಆದಾಯವನ್ನು ಪರಿಗಣನೆಗೆ ತೆಗೆದುಕೊಳ್ಳದೆ (ಈವರೆಗಿನ ವಾರ್ಷಿಕ ಪರೀಕ್ಷೆಗಳಲ್ಲಿ ತೇರ್ಗಡೆಯಾದಲ್ಲಿ) ವಿದ್ಯಾರ್ಥಿ ವೇತನಗಳನ್ನು ತೃತೀಯ ಪಂಚವಾರ್ಷಿಕ ಯೋಜನೆ ಅವಧಿಯಲ್ಲಿ ಕೊಡಲು ಕೇಂದ್ರ ಸರ್ಕಾರವು ನಿರ್ಧರಿಸಿದೆ.