ಮಹೇಂದ್ರ-ನೆಹರೂ ಮಾತುಕತೆತೃಪ್ತಿಕರ ಅಂತ್ಯ

ನವದೆಹಲಿ, ಏ. 22- ನೇಪಾಳದ ದೊರೆ ಮಹೇಂದ್ರ ಮತ್ತು ಪ್ರಧಾನಮಂತ್ರಿ ನೆಹರೂ ಅವರುಗಳ ಮಾತುಕತೆ ಇಂದು ತೃಪ್ತಿಕರವಾಗಿ ಮುಕ್ತಾಯಗೊಂಡವು. ನೆಹರೂರೊಡನೆ ತಮ್ಮ ಮಾತುಕತೆ ಹಿತಕರ ಸನ್ನಿವೇಶದಲ್ಲಿ ನಡೆಯಿತೆಂದು ದೊರೆ ಮಹೇಂದ್ರರು ಮಾತುಕತೆ ಮುಗಿದ ಮೇಲೆ ಪತ್ರಿಕಾಗೋಷ್ಠಿಯೊಂದರಲ್ಲಿ ಹೇಳಿದರು. ನಿಮ್ಮ ಭೇಟಿ ಪಲಪ್ರದ ವಾಯಿತೇ? ಎಂದು ಕೇಳಿದ್ದಕ್ಕೆ ಅವರು ನಿಸ್ಸಂದೇಹವಾಗಿ ಎಂದು ಉತ್ತರವಿತ್ತರು.
ಅಲ್ಪಾದಾಯ ವರ್ಗದವರ ಮಕ್ಕಳಿಗೆ ಉಚಿತ ಶಿಕ್ಷಣ

ಬೆಂಗಳೂರು, ಏ. 22- ನಾನ್ ಗೆಜೆಟೆಡ್ ನೌಕರರು ಹಾಗೂ ಅಲ್ಪ ಆದಾಯ ಉಳ್ಳವರ ಮಕ್ಕಳಿಗೆ ಉಚಿತ ಸೆಕೆಂಡರಿ ಶಿಕ್ಷಣ ಒದಗಿಸಲು ಈಗಿರುವ ಆದಾಯ ಮಿತಿಯನ್ನು ಇಮ್ಮಡಿಸುವ ವಿಚಾರದಲ್ಲಿ ಸರ್ಕಾರ ಇನ್ನು ಒಂದು ವಾರದಲ್ಲಿ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದೆಯೆಂದು ಮುಖ್ಯಮಂತ್ರಿ ಶ್ರೀ ಎಸ್.ಆರ್. ಕಂಠಿಯವರು ಇಂದು ತಿಳಿಸಿದರು.

ಈಗಿರುವ 1200 ರೂಪಾಯಿಗಳ ವಾರ್ಷಿಕ ಆದಾಯ ಮಿತಿಯನ್ನು 2400 ರೂಪಾಯಿಗಳಿಗೆ ಹೆಚ್ಚಿಸಲು ಆಲೋಚಿಸಲಾಗಿದೆಯೆಂದೂ ಅವರಿಂದ 11 ಲಕ್ಷ ರೂಪಾಯಿಗಳಷ್ಟು ಹೆಚ್ಚಿನ ವೆಚ್ಚ ಬೀಳುವುದಾದರೂ ಅಲ್ಪಾದಾಯ ವರ್ಗದವರ ಮಕ್ಕಳಿಗೆ ವಿದ್ಯಾಭ್ಯಾಸ ಸೌಕರ್ಯ ಒದಗುವುದೆಂದೂ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.