ವಿಧಾನಸಭೆ ಚುನಾವಣಾ ಫಲಿತಾಂಶಕ್ಕೆ ಸಂಬಂಧಿಸಿದಂತೆ ರಾಜಕೀಯ ಪಂಡಿತರ ವಿಶ್ಲೇಷಣೆಗಳು ಹೊರಬರುತ್ತಿವೆ. ‘ಪ್ರತ್ಯೇಕ ಲಿಂಗಾಯತ ಧರ್ಮದ ಶಿಫಾರಸು ಕಾಂಗ್ರೆಸ್‌ಗೆ ಮುಳುವಾಯಿತು' ಎಂಬಂಥ ಅವಸರದ ಅಭಿಪ್ರಾಯವೂ ಹೊರಬಿದ್ದಿದೆ. ಇದರಲ್ಲಿ ಸತ್ಯಾಂಶವಿಲ್ಲವೆನಿಸುತ್ತದೆ. ಸಿದ್ದರಾಮಯ್ಯ ಕುರುಬರ ನಾಯಕ, ಕುಮಾರಸ್ವಾಮಿ ಒಕ್ಕಲಿಗರ ನಾಯಕ, ಯಡಿಯೂರಪ್ಪ ಲಿಂಗಾಯತರ ಏಕೈಕ ಮಾಸ್ ಲೀಡರ್. ಮುಖ್ಯಮಂತ್ರಿ ಅಭ್ಯರ್ಥಿಯಾದ ಯಡಿಯೂರಪ್ಪನವರನ್ನು ಲಿಂಗಾಯತರು ಸಹಜವಾಗಿ ಬೆಂಬಲಿಸಿದ್ದಾರೆ. ಆ ಮೂಲಕ 'ನೀರಿಗಿಂತ ರಕ್ತ ಗಟ್ಟಿ' ಎಂಬುದನ್ನು ಸಾಬೀತುಪಡಿಸಿದ್ದಾರೆ!

ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಶಿಫಾರಸು ಮಾಡದೇ ಇದ್ದಿದ್ದರೂ ಲಿಂಗಾಯತರು ಬೆಂಬಲಿಸುತ್ತಿದ್ದುದು ಯಡಿಯೂರಪ್ಪನವರನ್ನೇ ಹೊರತು ಸಿದ್ದರಾಮಯ್ಯನವರನ್ನಲ್ಲ! ಕಾಂಗ್ರೆಸ್ ಸೋಲಿಗೆ ಕಾರಣಗಳು ಹಲವಾರಿವೆ. ಮೋದಿ, ಅಮಿತ್ ಶಾ ಮೋಡಿಯೂ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲು ದೊಡ್ಡ ಕಾರಣವೆಂಬುದನ್ನು ಅಲ್ಲಗಳೆಯಲಾಗದು. 'ಲಿಂಗಾಯತ ಪ್ರತ್ಯೇಕ ಧರ್ಮದ ಘೋಷಣೆಯ ಉದಾತ್ತ ಉದ್ದೇಶಗಳು ಲಿಂಗಾಯತ ಸಮುದಾಯದ ಬೇರು ಮಟ್ಟಕ್ಕೆ ಮುಟ್ಟಲಿಲ್ಲ, ಕಾಲಾವಕಾಶವೂ ಇರಲಿಲ್ಲ...' ಎಂಬ ಅಭಿಪ್ರಾಯವೇ ನಮಗೆ ಸರಿ ಎನಿಸುತ್ತದೆ.
ಬಸವಶ್ರೀ ಬಂಡೋಳಿ, ಹುಣಸಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.