‘ಐಎಸ್‍ಐ ಹೆಲ್ಮೆಟ್‍ಗಷ್ಟೇ ವಿಮೆ’ (ಪ್ರ.ವಾ., ಜ.10) ಎಂದು ಹೈಕೋರ್ಟ್ ತೀರ್ಪು ನೀಡಿದೆ. ದ್ವಿಚಕ್ರ ವಾಹನ ಸವಾರರ ಸುರಕ್ಷತೆಯ ದೃಷ್ಟಿಯಿಂದ ಈ ತೀರ್ಪು ಸ್ವಾಗತಾರ್ಹ.

ಗುಣಮಟ್ಟ ಖಾತರಿಪಡಿಸಬೇಕು ಎಂಬ ಕಾರಣಕ್ಕೆ, ಹೆಲ್ಮೆಟ್‍ನ ಮೇಲೆ ಐಎಸ್‍ಐ 4151ರ ಜೊತೆಗೆ ತಯಾರಿಕಾ ಕಂಪನಿಯ ಹೆಸರು ನಮೂದಾಗಿರಬೇಕೆನ್ನುವುದು ಸಹ ಒಪ್ಪಿಕೊಳ್ಳಬಹುದಾದ ವಿಚಾರ. ಆದರೆ, ಹೆಲ್ಮೆಟ್ ತಯಾರಿಸಿದ ದಿನಾಂಕ, ವರ್ಷ ಹಾಗೂ ಗಾತ್ರದ ವಿವರವೂ ಅಳಿಸಿಹೋಗದಂತೆ ಓದುವಂತಿರಬೇಕು ಎನ್ನುವ ನಿಯಮ ಮಾತ್ರ ಸಮಂಜಸವಲ್ಲ, ಪ್ರಾಯೋಗಿಕವೂ ಅಲ್ಲ. ಬಿಸಿಲು, ಮಳೆಗೆ ಒಡ್ಡಿಕೊಂಡ ಹೆಲ್ಮೆಟ್ ಮೇಲಿನ ಈ ವಿವರಗಳು ಕ್ರಮೇಣ ಮಸುಕಾಗುತ್ತವೆ ಇಲ್ಲಾ ಅಂಟಿಸಿದ ವಿವರ ಕಿತ್ತುಹೋಗುವ ಸಾಧ್ಯತೆ ಇರುತ್ತದೆ.

ಕಾನೂನು ಪಾಲನೆಯ ಹೊಣೆಹೊತ್ತ ಸಂಚಾರಿ ಪೊಲೀಸರು ಈ ಅಂಶವನ್ನೇ ಆಧಾರವಾಗಿಟ್ಟು ದ್ವಿಚಕ್ರ ವಾಹನ ಸವಾರರಿಗೆ ಕಿರುಕುಳ ಕೊಡುವ ಸಾಧ್ಯತೆ ಇದೆ. ನಿಯಮ ಕಾರ್ಯಗತವಾಗುವ ಮುನ್ನ ಈ ಸಂಶಯಗಳನ್ನು ನೀಗಿಸುವುದು ಅಗತ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.