ಭಾನುವಾರ, ಏಪ್ರಿಲ್ 11, 2021
32 °C

ವಾಚಕರ ವಾಣಿ: ಮಹನೀಯರ ಮಾದರಿ ನಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಮಠಗಳ ಪೋಷಣೆ ಮತ್ತು ಭಕ್ತರು’ ಎಂಬ ಮಲ್ಲಿಕಾರ್ಜುನ ಹೆಗ್ಗಳಗಿ ಅವರ ಲೇಖನ (ಸಂಗತ ಫೆ. 24) ಪ್ರಸ್ತುತ ಸಂದರ್ಭದಲ್ಲಿ ಎಲ್ಲರಿಗೂ ದಾರಿದೀಪವಾಗಬೇಕಿದೆ. ಸಿದ್ಧೇಶ್ವರ ಶ್ರೀಗಳು ಆತ್ಮಸಾಕ್ಷಿಗೆ ಬದ್ಧರಾಗಿ ಪ್ರಶಸ್ತಿ, ಪುರಸ್ಕಾರ, ಅನುದಾನ ಎಲ್ಲವನ್ನೂ ವಿನಮ್ರತೆಯಿಂದ ತ್ಯಜಿಸಿರುವುದು ಹಾಗೆಯೇ ಮೃತ್ಯುಂಜಯ ಸ್ವಾಮೀಜಿ ಅವರು ರಾಷ್ಟ್ರಪತಿಯಾಗಿದ್ದ ಬಾಬು ರಾಜೇಂದ್ರ ಪ್ರಸಾದ್ ಅವರು ತಮ್ಮ ಮಠಕ್ಕೆ ಭೇಟಿ ನೀಡಿದಾಗ, ಅವರ ಬರುವಿಕೆಗಿಂತ ವಿದ್ಯಾರ್ಥಿಗಳ ಊಟಕ್ಕೆ ಧಾನ್ಯ ಸಂಗ್ರಹಿಸಲು ತೆರಳುವುದಕ್ಕೆ ಆದ್ಯತೆ ನೀಡಿದ್ದುದು ಬಸವಣ್ಣನವರ ‘ಕಾಯಕವೇ ಕೈಲಾಸ’ ಎಂಬ ನುಡಿಯನ್ನು ನೆನಪಿಗೆ ತರುತ್ತದೆ. ಇಂತಹ ಮಹನೀಯರಿಂದಲೇ ಅಲ್ಲವೆ ಆದರ್ಶ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕಿರುವುದು. ಈಗಿನ ಪರಿಸ್ಥಿತಿ ಬೇರೆಯೇ ಇದೆ. ಅನುದಾನ, ಪುರಸ್ಕಾರಕ್ಕಾಗಿ ಪ್ರಭಾವಿಗಳ ಮೇಲೆ ಒತ್ತಡ ಹಾಕುವಂತಹ ಕಾಲಘಟ್ಟ ಇದು. ಮಹನೀಯರ ಸರಳ–ಸಜ್ಜನಿಕೆಯ ನಡೆ ಎಲ್ಲರಿಗೂ ಸ್ಫೂರ್ತಿದಾಯಕವಾಗಲಿ.

-ಸೌಮ್ಯ ಚೆಲುವರಾಜ್, ಬೆಂಗಳೂರು

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.