ಸೋಮವಾರ, ಏಪ್ರಿಲ್ 12, 2021
31 °C

ವಾಚಕರ ವಾಣಿ: ಆಪ್ತವಾಗದ ಹಾಡು; ಅರ್ಥವಿಲ್ಲದ ಸಾಹಿತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿನಿಮಾಗಳಲ್ಲಿ ಚಿತ್ರಕಥೆ, ಸಾಹಿತ್ಯದ ಜೊತೆಗೆ ಹಾಡುಗಳೂ ಅಷ್ಟೇ ಮುಖ್ಯವಾಗಿರುತ್ತವೆ. ಕೆಲವು ಮತ್ತೆ ಮತ್ತೆ ಕೇಳಬೇಕು ಅನಿಸಿದರೆ ಇನ್ನು ಕೆಲವು ಕರ್ಣ ಕಠೋರವಾಗಿರುತ್ತವೆ. ಅಬ್ಬರದ ದನಿ ಒಂದೆಡೆಯಾದರೆ ಅರ್ಥವಿಲ್ಲದ ಸಾಹಿತ್ಯ ಮತ್ತೊಂದೆಡೆ. ಮತ್ತೆ ಕೆಲವು ಹಾಡುಗಳು ಭಯಾನಕವಾದ ಪದಪುಂಜಗಳನ್ನು ಒಳಗೊಂಡಿದ್ದು ಅವನ್ನು ಕೆಲವು ಸೆಲೆಬ್ರಿಟಿಗಳು ಹಾಡಿರುವುದಕ್ಕೋ ಏನೋ ಹೆಚ್ಚು ಪ್ರಾಮುಖ್ಯ ಪಡೆಯುತ್ತವೆ. ಹಿಂಸೆಯನ್ನು ಬಿಂಬಿಸುವುದರ ಜೊತೆಗೆ ವಿಶೇಷವಾಗಿ ಹೆಣ್ಣುಮಕ್ಕಳ ಕುರಿತು ಅವಹೇಳನಕಾರಿ, ಪ್ರಚೋದನಕಾರಿ ಶಬ್ದಗಳನ್ನು ಬಳಸಲಾಗು
ತ್ತಿದೆ. ಇಂತಹ ಹಾಡುಗಳನ್ನು ಕೇಳಿದಾಗ ವೇದನೆಯಾಗುವುದರ ಜೊತೆಗೆ ಕೆಲವು ಪ್ರಶ್ನೆಗಳು ಮೂಡುತ್ತವೆ. ಇಂತಹ ಹಾಡುಗಳ ಉದ್ದೇಶವೇನು? ಅವನ್ನು ರಚಿಸಿದವರು ಹಾಗೂ ಹಾಡಿದವರ ಮನಃಸ್ಥಿತಿ ಎಂಥದ್ದಿರಬಹುದು?  ಆ ಹಾಡುಗಳ ಅವಶ್ಯಕತೆ ಇತ್ತೇ? ಒಂದು ವೇಳೆ ಹಾಗಿದ್ದರೆ ಆ ಸಿನಿಮಾಗಳು ಯಾವ ಸಂದೇಶ ಸಾರುತ್ತಿವೆ ಎಂಬಂಥ ಪ್ರಶ್ನೆಗಳಿಗೆ ಕಾರಣವಾಗುತ್ತವೆ.

ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯಗಳು ದಿನೇ ದಿನೇ ಹೆಚ್ಚುತ್ತಿರುವ ಸಂದರ್ಭದಲ್ಲಿ ಇಂತಹ ಹಾಡುಗಳು ಕ್ರೌರ್ಯ ವನ್ನು ಮತ್ತಷ್ಟು ಉತ್ತೇಜಿಸುವುದಿಲ್ಲವೇ? ಮನರಂಜನೆಯ ಜೊತೆಗೆ ಒಂದಷ್ಟು ಸಾಮಾಜಿಕ ಬದ್ಧತೆಯೂ ಇದ್ದಾಗ ಅದು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಜನಮಾನಸದಲ್ಲಿ ಉಳಿಯುತ್ತದೆ. ಈ ಕಾರಣದಿಂದಲೇ ಅಲ್ಲವೇ ಹಳೆಯ ಮಧುರ ಗೀತೆಗಳು ಜನರಿಗೆ ಇಂದಿಗೂ ಆಪ್ತವಾಗಿ ಇರುವುದು.

ಡಾ. ಗಿರಿಜಾ ಕೆ.ಎಸ್., ತುಮಕೂರು

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.