ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ತಮ್ಮ ಮಕ್ಕಳಿಗೆ ತಾವೇ ವಿಷ ಉಣಿಸುತ್ತಿರುವವರು...

Last Updated 22 ಮಾರ್ಚ್ 2022, 19:30 IST
ಅಕ್ಷರ ಗಾತ್ರ

ರಾಜ್ಯದಲ್ಲಿ ಕೆಲವೆಡೆ ರೈತರು ಕಳೆ ಹಾಗೂ ಕೀಟನಾಶಕವಾಗಿ ಅತ್ಯಂತ ಅಪಾಯಕಾರಿ ಗ್ಲೈಕೊ ಫಾಸ್ಫೇಟ್ ಬಳಸುತ್ತಿ ರುವುದು ಆಘಾತಕಾರಿ. ಹೀಗೆ ತಿಳಿದೋ ತಿಳಿಯದೆಯೋ ಭೂಮಿಗೆ ವಿಷವುಣಿಸುತ್ತಿರುವ ಹಲವಾರು ರೈತರು ಈ ಮೂಲಕ ತಮ್ಮ ಮಕ್ಕಳಿಗೂ ತಾವು ನಿಧಾನವಾಗಿ ವಿಷ ಉಣಿಸುತ್ತಿದ್ದೇವೆ ಎಂಬುದನ್ನು ಅರಿಯಬೇಕಿದೆ. ಗೃಹ ಬಳಕೆ ವಸ್ತುಗಳನ್ನು ಖರೀದಿಸುವಾಗ ಹತ್ತಾರು ಬಾರಿ ಯೋಚಿಸಿ, ವಿಚಾರಿಸಿ, ಆ ವಸ್ತುಗಳು ದೀರ್ಘಾವಧಿ ಬಾಳಿಕೆ ಬರುತ್ತವೆ ಎಂಬುದನ್ನು ಖಾತರಿಪಡಿಸಿಕೊಂಡ ಮೇಲೆಯೇ ಖರೀದಿಸುವ ನಾವು, ನಮ್ಮ ಜೀವನಪೂರ್ತಿ ಬದುಕಲು ಆಸರೆ ಯಾದ ನಮ್ಮ ನೆಲ, ಜಲವನ್ನು ಈ ರೀತಿ ಹಾನಿಕಾರಕ ರಾಸಾಯನಿಕಗಳನ್ನು ಬಳಸಿ ಹಾಳು ಮಾಡುತ್ತಿರುವುದು ನಿಲ್ಲ ಬೇಕು. ಹಾನಿಕಾರಕ ರಾಸಾಯನಿಕ ಬಳಕೆಯ ನಿರ್ಬಂಧಕ್ಕೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು.

-ಎಸ್.ನಾಗರಾಜ, ನಾಗೂರ, ಬಾಗಲಕೋಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT