ಎಲ್ಲ ಇಲಾಖೆಗಳು ಹೀಗೆ ಮಿಂಚಂಚೆ ಗಮನಿಸಲಿ
ಹಳ್ಳಿಯೊಂದರ ವಿದ್ಯುತ್ ಸಂಪರ್ಕದ ವಿಚಾರಕ್ಕೆ ಸಂಬಂಧಿಸಿದಂತೆ ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕರಿಗೆ
ಇ– ಮೇಲ್ ಮೂಲಕ ಒಂದು ಪತ್ರ ಕಳುಹಿಸಿದೆ. ಎಲ್ಲ ಇಲಾಖೆಗಳಂತೆ ಬೆಸ್ಕಾಂ ಎಂ.ಡಿ ಕಚೇರಿಯವರು ಕೂಡ ನನ್ನ ಪತ್ರ ಓದುವ ಸಾಹಸ ಮಾಡಲಾರರು ಎಂದೇ ಭಾವಿಸಿದ್ದೆ. ಆದರೆ ಪತ್ರ ಕಳುಹಿಸಿದ ಒಂದು ಗಂಟೆಯೊಳಗೆ ಕಚೇರಿಯಿಂದ ‘ನೀವು ಈ ಕುರಿತು ಇಲಾಖೆಯೊಂದಿಗೆ ಮಾಡಿರುವ ಪತ್ರ ವ್ಯವಹಾರಗಳನ್ನು ಒದಗಿಸಿ’ ಎಂದು ಇ– ಮೇಲ್ ಪ್ರತಿಕ್ರಿಯೆ ಬಂದಿತು!
ಕಚೇರಿಗಳಿಗೆ ಮುದ್ದಾಂ ಸಲ್ಲಿಸಿದರೂ ಒಂದು ಹಿಂಬರಹ ನೀಡದ ಇಲಾಖೆಗಳ ಸಿಬ್ಬಂದಿಯ ನಡುವೆ ಒಂದು ಇ– ಮೇಲ್ ಅನ್ನು ಆ ಕ್ಷಣಕ್ಕೆ ತೆರೆದು ನೋಡಿ ಪ್ರತಿಕ್ರಿಯಿಸಿದ್ದು ಒಳ್ಳೆಯ ಬೆಳವಣಿಗೆಯೇ ಸರಿ. ಎಲ್ಲ ಕಚೇರಿಗಳಲ್ಲೂ ಇ– ಮೇಲ್ ಪತ್ರಗಳನ್ನು ಓದಿ ಪ್ರತಿಕ್ರಿಯೆ ನೀಡಬೇಕೆಂದು ಮುಖ್ಯ ಕಾರ್ಯದರ್ಶಿಗಳ ಆದೇಶವೇ ಇದೆ. ಆದರೆ, ಅದು ಪಾಲನೆಯಾಗುತ್ತಿಲ್ಲವಷ್ಟೆ. ಈಗಲಾದರೂ ಈ ಆದೇಶ ಪಾಲನೆಯಾದರೆ ಜನ ಕಚೇರಿಗಳಿಗೆ ಅಲೆಯುವುದು ತಪ್ಪುತ್ತದೆ. ಈಗಿನ ಕೊರೊನಾ ಸಂದರ್ಭದಲ್ಲಂತೂ ಮತ್ತಷ್ಟು ಅನುಕೂಲವಾಗುತ್ತದೆ.
- ಲಕ್ಷ್ಮೀಕಾಂತರಾಜು ಎಂ.ಜಿ., ಮಠಗ್ರಾಮ, ಗುಬ್ಬಿ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.