ಎಸ್.ಎಸ್.ಸಿ ಮೂಲಕ ಹುದ್ದೆ ನೇಮಕಾತಿ: ಸಾಕ್ಷಿಪ್ರಜ್ಞೆ ಧ್ವನಿ ಎತ್ತಲಿ

7

ಎಸ್.ಎಸ್.ಸಿ ಮೂಲಕ ಹುದ್ದೆ ನೇಮಕಾತಿ: ಸಾಕ್ಷಿಪ್ರಜ್ಞೆ ಧ್ವನಿ ಎತ್ತಲಿ

Published:
Updated:

ಸ್ಟಾಫ್ ಸೆಲೆಕ್ಷನ್ ಕಮಿಷನ್ (ಎಸ್.ಎಸ್.ಸಿ) ಮೂಲಕ ಒಟ್ಟು 76,500 ಹುದ್ದೆ ತುಂಬಲು ಕೇಂದ್ರ ಗೃಹ ಸಚಿವಾಲಯ ಮುಂದಾಗಿದೆ (ಪ್ರ.ವಾ., ಫೆ.7). ಸಿ.ಆರ್.ಪಿ.ಎಫ್, ಬಿ.ಎಸ್.ಎಫ್‌ ಮೊದಲಾದೆಡೆ ಖಾಲಿ ಇರುವ ಹುದ್ದೆಗಳಿಗೆ ಈ ನೇಮಕಾತಿ ನಡೆಯುತ್ತಿದೆ. ವಿಷಾದದ ಸಂಗತಿ ಎಂದರೆ, ಈ ಪರೀಕ್ಷೆಗಳು ಇಂಗ್ಲಿಷ್‌ ಮತ್ತು ಹಿಂದಿ ಭಾಷೆಗಳಲ್ಲಿ ಮಾತ್ರ ನಡೆಯುತ್ತವೆ. ಕನ್ನಡ ಮಾಧ್ಯಮದಲ್ಲಿ ಜ್ಞಾನ ಗಳಿಸಿದ ಮಕ್ಕಳು ಈ ಪರೀಕ್ಷೆಗಳ ಸ್ಪರ್ಧೆಯ ವ್ಯಾಪ್ತಿಗೆ ಬರುವುದಿಲ್ಲ. ಕನ್ನಡ ಅಸ್ಮಿತೆಯ ಸಾಕ್ಷಿಪ್ರಜ್ಞೆಯನ್ನು ಇಟ್ಟುಕೊಂಡಿರುವವರು ಈ ವಿಷಯದ ಬಗ್ಗೆ ಧ್ವನಿ ಎತ್ತಬೇಕಾಗಿದೆ.

ಕನ್ನಡ ಮಾಧ್ಯಮದಲ್ಲಿ ಓದಿ ಶ್ರೀಮಂತ ಜ್ಞಾನ ಗಳಿಸಿದ ಲಕ್ಷಾಂತರ ನಿರುದ್ಯೋಗಿಗಳು ಕರ್ನಾಟಕದಲ್ಲಿ ಇದ್ದಾರೆ. ಇವರಲ್ಲಿ ಬಹುತೇಕರು ಶೋಷಿತ ಜಾತಿ, ವರ್ಗಗಳಿಂದ ಬಂದವರಾಗಿದ್ದಾರೆ. ಇಂತಹ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ಅವಕಾಶ ಕಲ್ಪಿಸಬೇಕಾದುದು ಸದ್ಯದ ಅಗತ್ಯ. ಇದು ಒಕ್ಕೂಟ ವ್ಯವಸ್ಥೆಯನ್ನು ಬಲಗೊಳಿಸುವ ಮಾರ್ಗ ಸಹ.

-ಗಿರೀಶ್ ಯರಗಟ್ಟಿಹಳ್ಳಿ, ಹನುಮಂತ ದೇವರ ಕಣಿವೆ, ಹೊಳಲ್ಕೆರೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !