ಗುರುವಾರ , ಆಗಸ್ಟ್ 6, 2020
28 °C

ಯುವಜನರಿಗೆ ಮನವರಿಕೆಯಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟಿಕ್‌ ಟಾಕ್‌ ಮಾಡಲು ಹೋಗಿ ಬೆನ್ನುಮುರಿ ಮುರಿದುಕೊಂಡಿದ್ದ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಗೋಡೆಕೆರೆ ಗ್ರಾಮದ ಕುಮಾರ್ (23), ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿರುವುದು ನೋವಿನ ಸಂಗತಿ. ಈಗಲಾದರೂ ಸರ್ಕಾರವು ಟಿಕ್‌ ಟಾಕ್ ವಿಡಿಯೊ ಶೇರಿಂಗ್‌ ಆ್ಯಪ್‌ ಅನ್ನು ನಿಷೇಧಿಸಬೇಕು. ಇದರ ಜೊತೆಗೆ ಯುವಜನ ಸಹ ಎಚ್ಚೆತ್ತುಕೊಳ್ಳಬೇಕು. ಈಗಂತೂ ಹಿರಿಯರಿಂದ ಯುವಕರವರೆಗೆ ಹಲವರು ಟಿಕ್ ಟಾಕ್ ಗೀಳು ಹತ್ತಿಸಿಕೊಂಡಿದ್ದಾರೆ. ಯುವಜನ ತಮ್ಮ ಭವಿಷ್ಯವನ್ನು ಮರೆತು ಮನರಂಜನೆಯಲ್ಲೇ ಹೆಚ್ಚು ಕಾಲ ಕಳೆಯುತ್ತಿದ್ದಾರೆ. ತಮಗಾಗಿ ಹಾಗೂ ಸಮಾಜದ ಹಿತಕ್ಕಾಗಿ ಅವರು ಚಿಂತಿಸಬೇಕಾಗಿದೆ.

- ಹಾಜಪ್ಪಾ ಗಂಜಗೀರಿ, ಚಿಂಚೋಳಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು