ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವರಿಗೆ ಜಾಗ ಕೊಡಲು ನಾವ್ಯಾರು?

Last Updated 11 ನವೆಂಬರ್ 2019, 19:42 IST
ಅಕ್ಷರ ಗಾತ್ರ

ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿದ ತೀರ್ಪನ್ನು ಇಡೀ ದೇಶ ಸ್ವಾಗತಿಸಿದ್ದರೆ, ಇಬ್ಬರಿಗೆ ಮಾತ್ರ ಇದು ಅಪಥ್ಯವೆನಿಸಿದೆ. ಅವರೆಂದರೆ, ಒವೈಸಿ ಮತ್ತು ಪ್ರಮೋದ ಮುತಾಲಿಕ್! ಒಬ್ಬರು, ಐದು ಎಕರೆ ಜಾಗಕ್ಕಾಗಿ ಇಷ್ಟು ವರ್ಷ ನಾವು ಹೋರಾಡಬೇಕಿತ್ತೇ, ಅಯೋಧ್ಯೆಯಲ್ಲಿ ಭೂಮಿ ಖರೀದಿಸುವಷ್ಟು ಸಾಮರ್ಥ್ಯ ನಮ್ಮ ಸಮುದಾಯಕ್ಕಿಲ್ಲವೇ ಎಂದಿದ್ದಾರೆ.

ಇನ್ನೊಬ್ಬರು, ಅವರಿಗೆ ಐದು ಎಕರೆ ಜಾಗ ಕೊಟ್ಟರೆ ಅವರ ಹೋರಾಟವನ್ನು ಒಪ್ಪಿಕೊಂಡಂತಾಗುತ್ತದೆ ಎಂದಿದ್ದಾರೆ! ದ್ವೇಷದ ವಾತಾವರಣ ತಿಳಿಯಾಗುತ್ತಿರುವಾಗ ಇಂಥ ಹೇಳಿಕೆಗಳಿಗೆ ಭಾರತೀಯರಾದ ನಾವು ಕಿವಿಗೊಡಲಾರೆವು. ಅಲ್ಲಾಹುಗಾಗಲೀ ರಾಮಲಲ್ಲಾನಿಗಾಗಲೀ ಜಾಗ ಕೊಡಲು ನಾವ್ಯಾರು, ಇಡೀ ಜಗವೇ ಅವರದಾಗಿರುವಾಗ ಎಂಬ ಕನಿಷ್ಠ ತಿಳಿವಳಿಕೆಯೂ ಇವರಿಗಿಲ್ಲವಲ್ಲ?

–ವೀರೇಶ ಬಂಗಾರಶೆಟ್ಟರ, ಕುಷ್ಟಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT