ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡೀಪುರ ಮೇಲ್ಸೇತುವೆ ಆಘಾತಕಾರಿ

Last Updated 5 ನವೆಂಬರ್ 2018, 20:00 IST
ಅಕ್ಷರ ಗಾತ್ರ

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ರಾಷ್ಟ್ರೀಯ ಹುಲಿ ಸಂರಕ್ಷಣಾ ವನ್ಯಧಾಮ ಬಂಡೀಪುರದ ಮೂಲಕ ನೆರೆಯ ಕೇರಳಕ್ಕೆ ರಾತ್ರಿ ಹೊತ್ತು ವಾಹನಗಳು ಓಡಾಡಲು ಅನುಕೂಲ ಮಾಡಿಕೊಡುವ (ದುರ್)ಉದ್ದೇಶದಿಂದ ಗಡಿ ಪ್ರದೇಶದವರೆಗೆ ವಿಸ್ತರಿಸಿರುವ 47 ಕಿ.ಮೀ. ಉದ್ದದ ಮೇಲ್ಸೇತುವೆ ನಿರ್ಮಾಣಕ್ಕೆ ಒಪ್ಪಿಗೆ ನೀಡುವ ಪ್ರಮಾಣ ಪತ್ರವನ್ನು ನಮ್ಮ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟಿಗೆ ನೀಡಿರುವುದು ಯಾವ ಕಾರಣಕ್ಕೂ ಸಮರ್ಥನೀಯವಲ್ಲ.

ಕೇರಳ ಸರ್ಕಾರ ಮತ್ತು ಅಲ್ಲಿನ ವ್ಯಾಪಾರಿಗಳು, ಕರ್ನಾಟಕದ ವನ್ಯ ಸಂಪತ್ತು ಮತ್ತು ಜೀವ ಸಂಪತ್ತಿಗೆ ಮಾರಕವಾಗಿರುವ ಈ ರಸ್ತೆಯ ಮೇಲೆ ದುಂಬಾಲು ಬೀಳುತ್ತಿರುವುದು ಅವರ ಕ್ಷುಲ್ಲಕ ಮನಸ್ಸಿನ ಪ್ರತೀಕವಾಗಿದೆ. ಕೇರಳದಿಂದ ನಮ್ಮ ರಾಜ್ಯಕ್ಕೆ ವಾಹನಗಳು ಓಡಾಡಲು ಬೇರೆ ರಸ್ತೆಗಳು ಇರುವಾಗ ಈ ದಾರಿಯೇ ಬೇಕೆಂದು ಹಟ ಹಿಡಿಯುತ್ತಿರುವುದನ್ನು ಗಮನಿಸಿದರೆ ಅವರ ಉದ್ದೇಶ ಬೇರೆ ಇರಬಹುದೇನೊ ಎಂಬ ಅನುಮಾನ ಬರುತ್ತದೆ.

ಬಂಡೀಪುರದ ಪಕ್ಷಿ– ಪ್ರಾಣಿಗಳ ಸಹಜ ಸಂಚಾರಕ್ಕೆ ಈ ಮೇಲ್ಸೇತುವೆ ಸಂಚಕಾರ ತರುವುದರಲ್ಲಿ ಎರಡು ಮಾತಿಲ್ಲ. ಮಾತ್ರವಲ್ಲ, ನಮ್ಮ ಸ್ವಾಭಾವಿಕ ಪರಿಸರಕ್ಕೂ ಈ ಸೇತುವೆ ಮಾರಕವಾಗುತ್ತದೆ. ಕ್ರಮೇಣ ಇಲ್ಲಿನ ವೃಕ್ಷಸಂಪತ್ತಿಗೂ ಕೊಡಲಿ ಏಟು ಬೀಳುವುದರ ಬಗ್ಗೆಯೂ ಅನುಮಾನವಿಲ್ಲ.

ಈ ಬಗ್ಗೆ ಸ್ಥಳೀಯ ರಾಜಕೀಯ ಮುಂದಾಳುಗಳು, ರಾಜ್ಯದ ಹಿತಚಿಂತಕರು, ಸಂಘಸಂಸ್ಥೆಗಳು ಗಟ್ಟಿಯಾಗಿ ಧ್ವನಿ ಎತ್ತಬೇಕಿದೆ. ಯಾವ ಕಾರಣಕ್ಕೂ ಬಂಡೀಪುರದಲ್ಲಿ ಮೇಲು ಸೇತುವೆ ಆಗಲು ಬಿಡಬಾರದು. ಕರ್ನಾಟಕದ ಮುಖ್ಯಮಂತ್ರಿ ಈ ಕುರಿತು ತಮ್ಮ ಅಸಮ್ಮತಿಯನ್ನು ವ್ಯಕ್ತಪಡಿಸಿದ್ದಾರೆ. ಅವರ ನಿಲುವು ಕೊನೆಯವರೆಗೂ ಇದೇ ಆಗಿರಲಿ. ಬಂಡೀಪುರದ ಹಿತರಕ್ಷಣೆಯ ಮೂಲಕ ನಮ್ಮ ರಾಜ್ಯದ ಹಿತವನ್ನು ಜತನದಿಂದ ಕಾಪಾಡಲಿ. ಬಂಡೀಪುರ ಅರಣ್ಯ ಮತ್ತು ಹುಲಿಧಾಮ ನಮ್ಮ ರಾಜ್ಯದ ಸ್ವಾಭಾವಿಕ ಹಕ್ಕು. ಅದನ್ನು ಯಾರೂ ಪ್ರಶ್ನಿಸುವಂತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT