ಭಾನುವಾರ, ಜನವರಿ 24, 2021
19 °C

ವಾಚಕರ ವಾಣಿ: ಬಸವ ಚಿಂತನೆಗೆ ಹೊಸ ರೂಪ ಬೇಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಸವಾದಿಶರಣರ ಚಿಂತನೆಯ ಮಂಟಪವೇ ಅನುಭವ ಮಂಟಪ. ಆದರೆ ಬಸವಕಲ್ಯಾಣದಲ್ಲಿ ಸರ್ಕಾರ ನಿರ್ಮಿಸಲಿರುವ ನೂತನ ಅನುಭವ ಮಂಟಪಕ್ಕೆ ಸಂಬಂಧಿಸಿದ ಸುದ್ದಿಯ ಪತ್ರಿಕಾ ಜಾಹೀರಾತಿನಲ್ಲಿ, ‘ಸನಾತನ ಪ್ರಗತಿಪರ ಚಿಂತನೆಯ ಮರುಸೃಷ್ಟಿ ನೂತನ ಅನುಭವ ಮಂಟಪ ನಿರ್ಮಾಣ’ ಎಂದಿದ್ದುದನ್ನು ನೋಡಿ ದಿಗಿಲು ಬಡಿದಂತಾಯಿತು.

ಬಸವಣ್ಣನೆಂಬ ಶ್ರೇಷ್ಠ ಚಿಂತಕನಿಂದ ಹೊರಹೊಮ್ಮಿದ ಚಿಂತನೆಯು ಸನಾತನ ಕ್ರೂರ ವ್ಯವಸ್ಥೆಯ ವಿರುದ್ಧ ಹೊರಹೊಮ್ಮಿದ್ದೇ ಹೊರತು, ಅದು ಸನಾತನ ಪ್ರಗತಿಪರ ಚಿಂತನೆಯ ಮರುಸೃಷ್ಟಿಯಲ್ಲ. ಹನ್ನೆರಡನೆಯ ಶತಮಾನದ ಪ್ರಗತಿಪರ ಕ್ರಾಂತಿಯ ಎಲ್ಲ ಹಂತಗಳಲ್ಲಿ ಕಂಡುಬಂದದ್ದು, ಜಿಡ್ಡುಗಟ್ಟಿದ ಸನಾತನ ವ್ಯವಸ್ಥೆಯ ವಿರುದ್ಧ ಸಿಡಿದೆದ್ದ ಚಿಂತನೆಗಳಾಗಿವೆ ಎಂಬ ಕನಿಷ್ಠ ಜ್ಞಾನ ನಮಗೆ ಇಲ್ಲದೇಹೋದದ್ದು ದುರದೃಷ್ಟಕರ. ಸನಾತನ ವ್ಯವಸ್ಥೆಯ ಲೋಪ ದೋಷಗಳ ಕುರಿತು ಚರ್ಚಿಸಲೆಂದೇ ರೂಪುಗೊಂಡಿದ್ದ ಆ ಅನುಭವ ಮಂಟಪವನ್ನು ಇಂದು ಸನಾತನ ವ್ಯವಸ್ಥೆಯೊಂದಿಗೆ ಜೋಡಿಸಿ, ಬಸವಣ್ಣನವರ ಹೆಸರಿಗೆ ಕಳಂಕ ತರುವ ಪ್ರಯತ್ನ ಮಾಡಬಾರದು. ಅನುಭವ ಮಂಟಪವನ್ನು ಪುನರುಜ್ಜೀವನಗೊಳಿಸದಿದ್ದರೂ ಪರವಾಗಿಲ್ಲ, ಬಸವಣ್ಣನವರ ಚಿಂತನೆಗಳನ್ನು ವಿರೂಪಗೊಳಿಸದಿದ್ದರೆ ಒಳ್ಳೆಯದು.

–ಡಾ. ಜಗದೀಶ ನೂಲಿನವರ, ಯಾದಗಿರಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು