ಶುಕ್ರವಾರ, ಜನವರಿ 22, 2021
28 °C

ಬಿಡಿಎ ಇನ್ನಾದರೂ ಜನಮುಖಿಯಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಖಾತೆಯಲ್ಲಿ ವರ್ಷದೊಳಗೆ ಕನಿಷ್ಠ ₹ 3 ಸಾವಿರ ಕೋಟಿ ಹಣ ಇರುವಂತೆ ಕೆಲಸ ನಿರ್ವಹಿಸುವುದಾಗಿ ಪ್ರಾಧಿಕಾರದ ನೂತನ ಅಧ್ಯಕ್ಷರು ಹೇಳಿರುವುದನ್ನು ಓದಿ (ಪ್ರ.ವಾ., ನ. 27) ಸಂತೋಷವಾಯಿತು. ಒಂದು ಕಾಲದಲ್ಲಿ ಅತ್ಯಂತ ನಂಬಿಕೆ ಹಾಗೂ ದಕ್ಷತೆಗೆ ಹೆಸರಾಗಿದ್ದ ಬಿಡಿಎ, ಕಾಲಕ್ರಮೇಣ ಭ್ರಷ್ಟಾಚಾರದ ಗೂಡು ಎಂಬ ಕಳಂಕವನ್ನು ಹೊತ್ತುಕೊಂಡಿತು.

ಹಲವರ ಸ್ವಂತ ಸೂರಿನ ಕನಸನ್ನು ತಕ್ಕಮಟ್ಟಿಗೆ ಈಡೇರಿಸುತ್ತಿದ್ದ ಸಂಸ್ಥೆ, ನಂತರದ ದಿನಗಳಲ್ಲಿ ಬಹುಪಾಲು ಬೆಂಗಳೂರಿಗರ ಕನಸನ್ನು ಕನಸಿಗೇ ಸೀಮಿತಗೊಳಿಸಿತು. ಖಾಸಗಿಯವರು ನಿರ್ಮಿಸುವ ಅನಧಿಕೃತ ಬಡಾವಣೆಗಳಲ್ಲಿ ತಮ್ಮ ಕನಸನ್ನು ನನಸಾಗಿಸಿಕೊಳ್ಳುವ ಪ್ರಯತ್ನಕ್ಕೆ ಪರೋಕ್ಷವಾಗಿ ಪುಷ್ಟಿ ನೀಡಿತು. ಇದರಿಂದ ಎಷ್ಟೋ ಜನ ತಮ್ಮ ಜೀವಮಾನದ ಗಳಿಕೆಯ ಹಣವನ್ನು ಕಳೆದುಕೊಂಡದ್ದೂ ಉಂಟು.

ಇನ್ನೊಂದೆಡೆ, ಮೂಲೆ ನಿವೇಶನದ ಹೆಸರಿನಲ್ಲಿ ಹರಾಜು ಪ್ರಕ್ರಿಯೆಗೆ ಹೆಚ್ಚು ಒತ್ತು ಕೊಟ್ಟು, ಈ ಪ್ರಾಧಿಕಾರವನ್ನು ಜನಸಾಮಾನ್ಯರಿಗೆ ಕೈಗೆಟುಕದ ಗಗನಕುಸುಮ ಎನ್ನುವಂತೆ ಮಾಡಲಾಯಿತು. ಬಿಡಿಎ ಇನ್ನಾದರೂ ಬೆಂಗಳೂರಿನ ಸರ್ವತೋಮುಖ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಟ್ಟು, ತನ್ನ ಹೆಸರಿಗೆ ತಕ್ಕ ಹಾಗೆ ನಡೆದುಕೊಳ್ಳುವಂತೆ ಆಗಲೆಂದು ಆಶಿಸೋಣ.
ಕಡೂರು ಫಣಿಶಂಕರ್, ಬೆಂಗಳೂರು

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು