ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಸ್ಎನ್ಎಲ್ ಆತ್ಮಾವಲೋಕನ ಮಾಡಿಕೊಳ್ಳಲಿ

Last Updated 24 ಅಕ್ಟೋಬರ್ 2019, 17:39 IST
ಅಕ್ಷರ ಗಾತ್ರ

ಬಿಎಸ್ಎನ್ಎಲ್ ಮುಚ್ಚುವುದಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ (ಪ್ರ.ವಾ., ಅ. 24). ಮುಚ್ಚುವ ಹಂತದಲ್ಲಿರುವ ಸಂಸ್ಥೆ ಪ್ರಸ್ತುತ ಐಸಿಯುನಿಂದ ಹೊರಬಂದಿರಬಹುದು. ಆದರೆ, ತನ್ನ ಆರೋಗ್ಯ ಸುಧಾರಿಸಲು ಸಂಸ್ಥೆ ಕೂಡ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಸರ್ಕಾರಿ ಸ್ವಾಮ್ಯದಲ್ಲಿರುವ ಹಲವು ಸಂಸ್ಥೆಗಳನ್ನು ಎರಡು ದಶಕಗಳಿಂದ ಮುಚ್ಚಲಾಗುತ್ತಿದೆ ಅಥವಾ ಅವು ಖಾಸಗಿಯವರ ಪಾಲಾಗಿವೆ. ಹೆಚ್ಚಿನ ಸಂದರ್ಭಗಳಲ್ಲಿ ಈ ಸಂಸ್ಥೆಗಳಲ್ಲಿನ ದುರಾಡಳಿತ, ಮಿತಿಮೀರಿದ ನಷ್ಟ, ಗ್ರಾಹಕರೊಂದಿಗೆ ನೌಕರರ ವರ್ತನೆ ಮುಂತಾದ ಕಾರಣಗಳೇ ಅವನ್ನು ಮುಚ್ಚಲು ಅಥವಾ ಗ್ರಾಹಕರು ಅವನ್ನು ತಿರಸ್ಕರಿಸಲು ಕಾರಣ. ಸಂಸ್ಥೆಯನ್ನು ಸರಿಯಾಗಿ ನಡೆಸದಿದ್ದರೆ, ಗ್ರಾಹಕರಿಗೆ ಉತ್ತಮ ಗುಣಮಟ್ಟ ಹಾಗೂ ಕ್ಷಿಪ್ರ ಸೇವೆ ನೀಡದಿದ್ದರೆ, ಖಾಸಗಿ ಕಂಪನಿಗಳ ಸ್ಪರ್ಧೆಯ ನಡುವೆ ಯಾವುದೇ ಸಂಸ್ಥೆ ಉಳಿಯಲು ಸಾಧ್ಯವಿಲ್ಲ. ಬಿಎಸ್‌ಎನ್‌ಎಲ್‌ ಸಹ ನಷ್ಟವನ್ನು ನಿಯಂತ್ರಿಸಿ, ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಸೇವೆ ನೀಡದೇ ಹೋದಲ್ಲಿ ಮತ್ತೆ ನಷ್ಟದ ಸುಳಿಗೆ ಸಿಲುಕಬಹುದು.

ಸುಘೋಷ ಎಸ್. ನಿಗಳೆ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT