ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿ, ಮತ ಮತ್ತು ಜಯಂತಿ

Last Updated 21 ನವೆಂಬರ್ 2018, 20:15 IST
ಅಕ್ಷರ ಗಾತ್ರ

'ಫಟಾಫಟ್’ ವಿಭಾಗದಲ್ಲಿ ಇಬ್ಬರು ಮುಖಂಡರು ಟಿಪ್ಪು ಜಯಂತಿ ಬಗ್ಗೆ ಮಾತನಾಡಿದ್ದಾರೆ (ಪ್ರ.ವಾ., ನ. 10). ಭಾರತ ರಾಷ್ಟ್ರವು ‘ಜಾತಿ, ಮತ, ಪಂಥ ನಿರಪೇಕ್ಷ ಪ್ರಜಾಪ್ರಭುತ್ವ’ ತತ್ತ್ವವನ್ನು ಆಧರಿಸಿದೆ. ಸ್ವಾತಂತ್ರ್ಯಪೂರ್ವ ಕಾಲವನ್ನು ಬಿಟ್ಟು ನಂತರದ ಸರ್ಕಾರದ ಆಡಳಿತ ಸಿದ್ಧಾಂತವನ್ನು ಪಾಲಿಸುವುದು ಮುಖ್ಯ. ಆದರೆ ವೈದಿಕ ಮತಕ್ಕೆ ಸರ್ಕಾರ ಪ್ರಾಶಸ್ತ್ಯ, ಆದ್ಯತೆ ಕೊಟ್ಟುಕೊಂಡೇ ಬಂದಿದೆ. ನಮ್ಮ ರಾಷ್ಟ್ರವು ನೇರವಾಗಿ ಸರ್ಕಾರಿ ಆಡಳಿತ ಯಂತ್ರ ಬಳಸಿ ಆಚರಿಸಬೇಕಾದುದು ಎರಡು ಆಚರಣೆಗಳನ್ನು. 1. ರಿಪಬ್ಲಿಕ್ ದಿನಾಚರಣೆ. 2. ಸ್ವಾತಂತ್ರ್ಯ ದಿನಾಚರಣೆ. ‘ರಾಷ್ಟ್ರಪಿತ’ ಎಂದು ಗಾಂಧೀಜಿ ಜಯಂತಿಯ ಆಚರಣೆಯು ಒಂದು ವಿಶೇಷ.

ಇಷ್ಟು ಬಿಟ್ಟು, ಸರ್ಕಾರದ ವತಿಯಿಂದ ಯಾವ ಮತ್ತು ಯಾರ ಜಯಂತಿಯನ್ನೂ ಆಚರಿಸುವುದು ತಾತ್ವಿಕವಾಗಿ ತಪ್ಪು. ಯಾವುದೇ ಮತದೊಡನೆ ಸರ್ಕಾರ ಗುರುತಿಸಿಕೊಳ್ಳುವುದು ಸಲ್ಲದು. ಮಠಾಧೀಶರು, ಜಗದ್ಗುರುಗಳು ಸರ್ಕಾರದ ಆಡಳಿತದಲ್ಲಿ ಕೈ ಹಾಕುವುದು ಮತ್ತು ರಾಷ್ಟ್ರಪತಿಯಿಂದ ಹಿಡಿದು ಪಂಚಾಯಿತಿ ಅಧ್ಯಕ್ಷರವರೆಗೆ ಅವರ ಕಾಲಿಗೆ ಬೀಳುವುದು, ಕಚೇರಿಗಳಲ್ಲಿ ಪೂಜೆ, ನಮಾಜು ಮಾಡುವುದು ಇಂಥವು ನಡೆಯಬಾರದು.

ಎಂ. ರಾಮಕೃಷ್ಣ,ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT