ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಬಜೆಟ್ ಮತ್ತು ಅಭಿವೃದ್ಧಿಯ ಸಾಧ್ಯತೆ

Last Updated 11 ಫೆಬ್ರುವರಿ 2021, 15:25 IST
ಅಕ್ಷರ ಗಾತ್ರ

ಜಗತ್ತಿನ ಅರ್ಥಶಾಸ್ತ್ರಜ್ಞರೆಲ್ಲ ಒಕ್ಕೊರಲಿನಿಂದ ಹೇಳುತ್ತಾ ಬಂದಿರುವ ಸತ್ಯವೆಂದರೆ, ಒಂದು ಆರ್ಥಿಕತೆಯು ಮುಗ್ಗಟ್ಟಿನಿಂದ- ಬಿಕ್ಕಟ್ಟಿನಿಂದ ಹದಗೆಟ್ಟಿದ್ದಾಗ ಇದಕ್ಕೆ ಪರಿಹಾರವೆಂದರೆ, ಸಾರ್ವಜನಿಕ ವೆಚ್ಚವನ್ನು ಹೆಚ್ಚಿಸುವುದು ಮತ್ತು ಸಮಗ್ರ ಬೇಡಿಕೆಯನ್ನು ಬಲಪಡಿಸುವುದು. ನಾವು ಈ ಸತ್ಯದಿಂದ ಪಾಠ ಕಲಿತಿಲ್ಲ ಎಂಬುದು ಕೇಂದ್ರ ಸರ್ಕಾರದ 2021-22ರ ಬಜೆಟ್ಟಿನಿಂದ ಸ್ಪಷ್ಟವಾಗುತ್ತದೆ. ನಮ್ಮ ಆರ್ಥಿಕತೆಯಲ್ಲಿನ ಸಾರ್ವಜನಿಕ ವೆಚ್ಚವು 2013-14ರಲ್ಲಿ ಜಿಡಿಪಿಯ ಶೇ 14.64ರಷ್ಟಿತ್ತು. ಈಗ 2021-22ರಲ್ಲಿ ಇದು ಶೇ 15.12 ರಷ್ಟಾಗಿದೆ. ಅಂದರೆ ಎಂಟು ವರ್ಷಗಳ ನಂತರ ಇದು ಶೇ 0.48ರಷ್ಟು ಏರಿಕೆಯಾಗಿದೆ. ಹಣದುಬ್ಬರದ ಹಿನ್ನೆಲೆಯಲ್ಲಿ ಇದನ್ನು ಪರಿಶೀಲಿಸಿದರೆ ಇದು ಕುಸಿದಿದೆ ಎಂದು ಹೇಳಬಹುದು.

ಎರಡನೆಯದಾಗಿ, ಕೇಂದ್ರದ ಸಾರ್ವಜನಿಕ ವೆಚ್ಚವು 2020-21ರಲ್ಲಿ ₹ 34.50 ಲಕ್ಷ ಕೋಟಿಯಿದ್ದುದು, 2021-22ರಲ್ಲಿ ₹ 34.83 ಲಕ್ಷ ಕೋಟಿಗೇರಿದೆ. ಇಲ್ಲಿನ ಏರಿಕೆ ಕೇವಲ ಶೇ 0.94. ಮೂರನೆಯದಾಗಿ, ತೆರಿಗೆ ಸಂಗ್ರಹವು 2020-21ರ ಬಜೆಟ್ ಅಂದಾಜು ₹ 16.35 ಲಕ್ಷ ಕೋಟಿಯಿತ್ತು. ಆದರೆ ವಾಸ್ತವವಾಗಿ ಸಂಗ್ರಹವಾಗಿರುವುದು ₹ 13.44 ಲಕ್ಷ ಕೋಟಿ. ಇಲ್ಲಿನ ಕುಸಿತ (-)ಶೇ 17.79. ಯಾವುದೇ ಆರ್ಥಿಕತೆಯಿರಲಿ ಸಂಪನ್ಮೂಲಕ್ಕೆ ಪ್ರಧಾನ ಮೂಲವೆಂದರೆ ತೆರಿಗೆ. ಆದರೆ 2021-22ರ ಬಜೆಟ್ಟಿನಲ್ಲಿ ಸಂಪನ್ಮೂಲಕ್ಕೆ ಅವಲಂಬಿಸಿರುವ ಎರಡು ಮೂಲಗಳೆಂದರೆ ಸಾಲ ಎತ್ತುವುದು ಮತ್ತು ಸಮಾಜದ ಆಸ್ತಿ ಸಂಪತ್ತನ್ನು ಮಾರಾಟ ಮಾಡುವುದು. ಇದು ಸಾರ್ವಜನಿಕ ಹಣಕಾಸು ನಿರ್ವಹಣೆ ಯಲ್ಲಿ ಅಶಿಸ್ತಿನ ಪರಾಕಾಷ್ಠೆ ಎಂದು ಹೇಳದೆ ವಿಧಿಯಿಲ್ಲ. ಈ ಹಿನ್ನೆಲೆಯಲ್ಲಿ 2021-22ರಲ್ಲಿ ಆರ್ಥಿಕ ಬೆಳವಣಿಗೆ
ಶೇ 11ರ ಗುರಿಯನ್ನು ಸಾಧಿಸಿಕೊಳ್ಳುವುದು ಸಾಧ್ಯವಿಲ್ಲ.

- ಟಿ.ಆರ್‌.ಚಂದ್ರಶೇಖರ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT