ಗುರುವಾರ , ಮೇ 13, 2021
38 °C

ಬಗ್ಗಿರಿ ಎಂದರೆ ತೆವಳುವವರು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಬಹುತ್ವಕ್ಕೆ ಮಾರಕವಾಗುತ್ತಿದೆ ಆಕಾಶವಾಣಿ’ ಎಂಬ ಡಾ. ಬಸವರಾಜ ಸಾದರ ಅವರ ಲೇಖನದಲ್ಲಿ (ಪ್ರ.ವಾ., ಏ. 17) ಉತ್ಪ್ರೇಕ್ಷೆಯೇನೂ ಇಲ್ಲ. ಆಕಾಶವಾಣಿಯಲ್ಲಿ ಪ್ರಸಾರವಾಗುವ ವಾರ್ತೆಗಳು ಕೂಡ ಆಳುವ ಪಕ್ಷದ ತುತ್ತೂರಿ ಊದುವುದಕ್ಕಷ್ಟೇ ಸೀಮಿತವಾಗಿವೆ. ರಾಜ್ಯದ ವಾರ್ತೆಗಳಿಗೆ ಆದ್ಯತೆ ಇರಬೇಕಾದ ‘ಪ್ರದೇಶ ಸಮಾಚಾರ’ದಲ್ಲಿ ಅರ್ಧಕ್ಕಿಂತ ಹೆಚ್ಚಿನ ಸಮಯ ಬಿಜೆಪಿಯ ಕೇಂದ್ರ ನಾಯಕರ ಹೇಳಿಕೆಗಳಿಗೆ ಮೀಸಲಾಗುತ್ತಿದೆ. ಜನ ಹಿತಾಸಕ್ತಿಯ ಸುದ್ದಿಗಳು ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ.

ರೇನ್‌ಬೊ ಚಾನೆಲ್ಲಿನಲ್ಲಿ ಎರಡು ನಿಮಿಷ ಪ್ರಸಾರವಾಗುವ ಸುದ್ದಿಸಾರದ್ದೂ ಇದೇ ಕಥೆ. ತಿಂಗಳ ಮೂರನೇ ವಾರ ಶುರುವಾಗುತ್ತಿದ್ದಂತೆ ಪ್ರತೀ ಗಂಟೆಯ ಸುದ್ದಿಯಲ್ಲೂ ‘ಮನ್ ಕಿ ಬಾತ್’ನ ಪ್ರೋಮೊವನ್ನು ಹೇವರಿಕೆ ಹುಟ್ಟುವಷ್ಟು ಸಲ ಪ್ರಸಾರ ಮಾಡುತ್ತಾರೆ. ಆಳುವವರು ‘ಬಗ್ಗಿರಿ’ ಎಂದರೆ ತೆವಳುವ ಸ್ಥಿತಿಗೆ ಬಂದು ನಿಂತಿದೆ ಇಂದಿನ ಆಕಾಶವಾಣಿ.

- ಶ್ರೀಧರ ಬಿ.ಎಲ್., ಬೆಂಗಳೂರು

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು