ಭಾನುವಾರ, ನವೆಂಬರ್ 28, 2021
20 °C

ವಾಚಕರ ವಾಣಿ: ಭಾಷೆ ಸುಧಾರಿಸಲಿ, ಘನತೆ ಕಾಯ್ದುಕೊಳ್ಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 

ಮಾತನಾಡುವ ಭಾಷೆ ಮನುಷ್ಯನ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತದೆ ಎಂದು ತಿಳಿದಿದ್ದೇವೆ. ಇಂದು ರಾಜಕಾರಣಿಗಳು ಮಾತನಾಡುವ ಭಾಷೆಯನ್ನು ಕೇಳಿದರೆ ಏನು ಹೇಳಬೇಕೆಂಬುದೇ ತಿಳಿಯುತ್ತಿಲ್ಲ. ಯಾವ ಯಾವ ರೀತಿ? ಎಂತೆಂತಹ ಮಾತು? ಏಕವಚನ ಪ್ರಯೋಗ, ಛೀ, ಅಸಹ್ಯ ಎನಿಸುತ್ತದೆ. ಜನಪ್ರತಿನಿಧಿಗಳಾಗಿ ಜನರಿಗೆ ಮಾದರಿಯಾಗಿ, ಆದರ್ಶವಾಗಿ ಇರಬೇಕಾದವರು ನಡೆದುಕೊಳ್ಳುವ ರೀತಿಯೇ ಇದು? ಆಡುತ್ತಿರುವ ಮಾತುಗಳನ್ನು ನೋಡಿದರೆ ಇವರ ಬಗ್ಗೆ ಗೌರವ ಭಾವನೆಯೇ ಬರುವುದಿಲ್ಲ. ಎಲ್ಲವೂ ಅಧಿಕಾರಕ್ಕಾಗಿ. 

ಇಂದು ನಮ್ಮ ಯುವಜನರ ಪರಿಸ್ಥಿತಿಯೂ ಹೀಗೆಯೇ ಇದೆ. ಚಲನಚಿತ್ರ ಒಳಗೊಂಡಂತೆ ಬೇರೆ ಬೇರೆ ಪ್ರಭಾವ ಗಳಿಂದಾಗಿ ಅವರಿಗೆ ಹಿರಿಯರನ್ನು ಹೇಗೆ ಮಾತನಾಡಿಸಬೇಕು, ಹೇಗೆ ಗೌರವಿಸಬೇಕು ಎಂಬ ಪರಿಜ್ಞಾನವೇ ಇಲ್ಲದಂತಾಗಿದೆ. ಚಿಕ್ಕ ಹುಡುಗರು ಸಹ 60-80ರ ವಯಸ್ಸಿನ ಹಿರಿಯರನ್ನು ಏನಣ್ಣಾ, ಬಾರೋ, ಹೋಗೋ, ಕೂತ್ಕೊಳ್ಳೋ, ಸರಿಯೋ ಎಂದೆಲ್ಲ ಮಾತನಾಡುತ್ತಾರೆ. ಪೊಲೀಸ್ ಠಾಣೆಗಳಲ್ಲಿ ರಾಜಕಾರಣಿಗಳು ಮತ್ತು ಪ್ರಭಾವಿಗಳನ್ನು ಬಿಟ್ಟರೆ ಪೊಲೀಸರು ಸಾಮಾನ್ಯವಾಗಿ ಎಲ್ಲರನ್ನೂ ಏಕವಚನದಲ್ಲೇ ಮಾತನಾಡಿಸುತ್ತಾರೆ. ಎಲ್ಲರಿಗೂ ಎಲ್ಲರ ಪರವಾಗಿ ಕೇಳುವುದು ಒಂದೇ, ಭಾಷೆಯನ್ನು ಸುಧಾರಿಸಿಕೊಳ್ಳಿ, ಘನತೆಯನ್ನು ಕಾಯ್ದುಕೊಳ್ಳಿ.

ಶಾಂತಿನಾಥ ಕೆ. ಹೋತಪೇಟಿ, ಹುಬ್ಬಳ್ಳಿ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.