ಶುಕ್ರವಾರ, ನವೆಂಬರ್ 15, 2019
23 °C

ಚೀನಾ- ಪಾಕಿಸ್ತಾನ ಆರ್ಥಿಕ ಕಾರಿಡಾರ್‌ | ಚೀನಾ ನಿಲುವು ಬದಲಿಸಲಿ

Published:
Updated:

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಚೀನಾ- ಪಾಕಿಸ್ತಾನ ಆರ್ಥಿಕ ಕಾರಿಡಾರ್‌ ಯೋಜನೆಯಡಿ ಚೀನಾ ಹೂಡಿಕೆ ಮಾಡುವುದನ್ನು ಭಾರತ ವಿರೋಧಿಸುತ್ತಿರುವುದು ನ್ಯಾಯೋಚಿತವಾಗಿದೆ. ಪಿಒಕೆ ಭಾರತದ ಅವಿಭಾಜ್ಯ ಅಂಗ. ಇಂತಹ ಸೂಕ್ಷ್ಮ ವಿಷಯಗಳಲ್ಲಿ ಚೀನಾ ಮೊದಲಿನಿಂದಲೂ ಮೂಗು ತೂರಿಸುತ್ತಲೇ ಇದೆ. ಇನ್ನೊಂದು ದೇಶದ ಆಂತರಿಕ ವಿಷಯದಲ್ಲಿ ಅದು ತಲೆ ಹಾಕುವುದು ಸರಿಯಲ್ಲ. ಭಾರತ ಮತ್ತು ನೆರೆಯ ರಾಷ್ಟ್ರಗಳೊಂದಿಗಿನ ಸಂಬಂಧಗಳಲ್ಲಿ ಚೀನಾ ತನ್ನ ನಿಲುವು ಬದಲಿಸಿಕೊಳ್ಳಬೇಕು.

ರಾಜಶೇಖರ ಎಸ್.ಗುಬ್ಬಿ, ಬಸವನಬಾಗೇವಾಡಿ

ಪ್ರತಿಕ್ರಿಯಿಸಿ (+)