ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಡಿತರ ವಿತರಣೆ: ಒಟಿಪಿ ಪರಿಗಣಿಸಿ

ಅಕ್ಷರ ಗಾತ್ರ

ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಲು ಸರ್ಕಾರ ಬಯೊಮೆಟ್ರಿಕ್‌ ವ್ಯವಸ್ಥೆ ಜಾರಿಗೊಳಿಸಿದೆ. ಆದರೆ ಈ ವ್ಯವಸ್ಥೆಯನ್ನು ಪರಿಚಯಿಸಿದ ನಂತರ ಹಿರಿಯ ನಾಗರಿಕರಿಗೆ ಹೆಬ್ಬೆಟ್ಟು ಮುದ್ರೆ ದೃಢಪಡಿಸುವುದು ದೊಡ್ಡ ಸವಾಲಾಗಿದೆ. ವಯಸ್ಸಾದ ಫಲಾನುಭವಿಗಳು ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಪಡೆಯಲು ಹೆಬ್ಬೆಟ್ಟನ್ನು ಗೋಡೆಗೆ ಉಜ್ಜಿ, ಮಣ್ಣಲ್ಲಿ ತಿಕ್ಕಿ ಪದೇ ಪದೇ ಪ್ರಯತ್ನಿಸುವುದನ್ನು ನೋಡುತ್ತಿದ್ದರೆ, ಮಾನವೀಯತೆ ಉಳ್ಳವರ ಕರುಳು ಚುರುಕ್ ಎನ್ನದೇ ಇರದು.

ಹಿರಿಯ ನಾಗರಿಕರಲ್ಲಿ ಬೆರಳಿನ ಮುದ್ರೆ ವಯೋಸಹಜ ಕಾರಣದಿಂದ ಮಾಸಿರುತ್ತದೆ. ಆದ್ದರಿಂದ ಅಂತಹವರಿಗೆ ಬಯೊಮೆಟ್ರಿಕ್‌ನಿಂದ ವಿನಾಯಿತಿ ನೀಡಿ, ಆಧಾರ್ ಆಧಾರಿತ ಮೊಬೈಲ್ ಒಟಿಪಿ ಮೂಲಕ ಪಡಿತರ ವಿತರಿಸುವುದು ಮಾನವೀಯ ನಡೆ.

-ಪ್ರವೀಣ ನಾಗಪ್ಪ ಯಲವಿಗಿ, ಹಾವೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT