ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲಸೌಕರ್ಯದ ಸದ್ಬಳಕೆ ಮಾರ್ಗ

Last Updated 31 ಮಾರ್ಚ್ 2020, 20:00 IST
ಅಕ್ಷರ ಗಾತ್ರ

ವಿವಿಧ ರಾಜ್ಯ ಸರ್ಕಾರಗಳು ವಲಸೆ ಕಾರ್ಮಿಕರು ಮುಂತಾದವರಿಗೆ ಊಟದ ವ್ಯವಸ್ಥೆ ಮಾಡುತ್ತಿವೆಯಷ್ಟೆ. ಅದಕ್ಕಾಗಿ ಅವು ಪ್ರಾಯಶಃ ದೊಡ್ಡದೊಡ್ಡ ಅಡುಗೆ ಮನೆಗಳನ್ನು ಹುಟ್ಟುಹಾಕಬೇಕು; ಗುತ್ತಿಗೆದಾರರನ್ನು ಗೊತ್ತು ಮಾಡಿಕೊಳ್ಳಬೇಕು. ಅದಕ್ಕೆ ಬದಲಾಗಿ, ಈಗ ಸದ್ಯ ಲಾಕ್‍ಡೌನ್ ಆಣತಿಯಿಂದಾಗಿ ಮುಚ್ಚಿರುವ ಹೋಟೆಲುಗಳ ಪೈಕಿ ಆಯ್ದ ಕೆಲವು ಹೋಟೆಲುಗಳ ಮಾಲೀಕರ ಜೊತೆ ಮಾತನಾಡಿ, ಅಲ್ಲಿ ಈಗಾಗಲೇ ಇರುವ ಅಡುಗೆಮನೆ ಸೌಕರ್ಯ ಹಾಗೂ ಸಿಬ್ಬಂದಿಯ ಸೇವೆಯನ್ನು ಬಳಸಿಕೊಂಡು ಅಡುಗೆಯ ವ್ಯವಸ್ಥೆ ಮಾಡಬಹುದಲ್ಲವೇ?

ಆ ಹೋಟೆಲುಗಳು ಸಾರ್ವಜನಿಕರಿಗೆ ತೆರೆದಿರಬಾರದು. ಸರ್ಕಾರವು ತಮಗೆ ಒಪ್ಪಿಸಿರುವ ಕೆಲಸವನ್ನು ಮುಚ್ಚಿದ ಬಾಗಿಲ ಹಿಂದೆ ಮಾಡಬೇಕು ಮತ್ತು ತಾವು ತಯಾರಿಸಿದ ಊಟಕ್ಕೆ ತಗುಲಿದ ಅಸಲಿ ಖರ್ಚಿನ ಬಾಬ್ತನ್ನು ಮಾತ್ರ ಸರ್ಕಾರದಿಂದ ಪಡೆಯಬೇಕು. ಆ ಊಟವನ್ನು ಸರ್ಕಾರಿ ಸಿಬ್ಬಂದಿಯೇ ನಿರ್ದಿಷ್ಟ ಸ್ಥಳಗಳಿಗೆ, ಲೇಬರ್‌ ಕ್ಯಾಂಪುಗಳಲ್ಲಿ ವಾಸ ಮಾಡುವವರಿಗೆ ಮತ್ತು ಅಂಥ ಊಟದ ಅಗತ್ಯವಿರುವವರಿಗೆ ತಲುಪಿಸಬೇಕು.

ಇಂಥದ್ದನ್ನು ಆಯಾ ರಾಜ್ಯ ಸರ್ಕಾರವು ತನ್ನ ರಾಜ್ಯದ ಹೋಟೆಲ್‌ ಮಾಲೀಕರ ಸಂಘಗಳು ಹಾಗೂ ಹೋಟೆಲ್‌ ಕೆಲಸಗಾರರ ಸಂಘಗಳೊಡನೆ ಸಮಾಲೋಚಿಸಿ ಮಾಡಬಹುದು. ಇದು ವಿಕೇಂದ್ರೀಕರಣದ ಮಾರ್ಗ. ಈಗಾಗಲೇ ಇರುವ ಮೂಲಸೌಕರ್ಯವನ್ನು ಸದುಪಯೋಗಪಡಿಸಿಕೊಳ್ಳುವ ಮಾರ್ಗ.

-ರಘುನಂದನ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT