ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕೋಪಯೋಗಿಯಲ್ಲ, ‘ಲೋಕಾಪವಾದ’ ಇಲಾಖೆ!

Last Updated 25 ನವೆಂಬರ್ 2018, 20:00 IST
ಅಕ್ಷರ ಗಾತ್ರ

‘ಮುಖ್ಯ ಎಂಜಿನಿಯರ್ ಹುದ್ದೆಗೆ ₹10 ಕೋಟಿ ಕಪ್ಪ!’ (ಪ್ರ. ವಾ., ಒಳನೋಟ, ನ. 25) ವರದಿಯನ್ನು ಓದಿ ದಿಗ್ಭ್ರಾಂತನಾದೆ. ಇಷ್ಟೊಂದು ಹಣವನ್ನು ‘ಕಪ್ಪ’ವಾಗಿ ಕೊಟ್ಟು ಬಂದವರು ಎಷ್ಟು ದೋಚಬಹುದು! ಈ ಮಹಾನ್ ತಿಮಿಂಗಿಲಗಳು ಕಟ್ಟಿದ ರಸ್ತೆಗಳು ಮೂರೇ ತಿಂಗಳಲ್ಲಿ ಹಳ್ಳಬಿದ್ದು, ಅಪಘಾತ ಸಂಭವಿಸಿ ಅಮಾಯಕರ ಬಲಿ ಪಡೆಯುತ್ತವೆ. ಇವರು ನಿರ್ಮಿಸಿದ ಕಳಪೆ ಕಾಮಗಾರಿಯ ಸೇತುವೆಗಳು ಮುರಿದು ತಲೆಗಳುರುಳುತ್ತವೆ. ಇವರು ನಿರ್ಮಿಸಿದ ಶಾಲೆ, ಆಸ್ಪತ್ರೆಗಳ ಕಟ್ಟಡಗಳು ಕುಸಿದು ಮಕ್ಕಳು, ರೋಗಿಗಳು ಬಲಿಯಾಗುತ್ತಾರೆ. ಜನರ ತೆರಿಗೆಯ ಹಣವು ಹೀಗೆ ವ್ಯರ್ಥವಾಗುತ್ತದೆ. ಒಂದೊಂದು ಹುದ್ದೆಗೂ ಒಂದೊಂದು ದರ! ಪ್ರಜಾಪ್ರಭುತ್ವದ ಅಪಹಾಸ್ಯ!

ಮಂಡ್ಯ ಜಿಲ್ಲೆಯ ಕನಗನಮರಡಿಯಲ್ಲಿ ನಡೆದ ದುರಂತಕ್ಕೂ ಪರೋಕ್ಷವಾಗಿ ಅವೈಜ್ಞಾನಿಕವಾಗಿ ನಿರ್ಮಾಣವಾದ ರಸ್ತೆಯೇ ಕಾರಣವಲ್ಲವೇ? ನಾಲೆಗೆ ತಡೆಗೋಡೆ ನಿರ್ಮಾಣವಾಗದಿರುವುದು ಸುಸ್ಪಷ್ಟ. ಇಂಥ ತಿಮಿಂಗಿಲಗಳು ತಾವು ಏನು ಮಾಡಿದರೂ ಸರಿಯೆಂದು ಭಾವಿಸಿದಂತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT