ಭಾನುವಾರ, ಜೂನ್ 13, 2021
23 °C

ಕೋವಿಡ್ ಪರೀಕ್ಷೆ ಕಡಿಮೆ ಮಾಡಿದ್ದೇಕೆ?

ವಾಚಕರ ವಾಣಿ Updated:

ಅಕ್ಷರ ಗಾತ್ರ : | |

ರಾಜ್ಯದಲ್ಲಿ ತಿಂಗಳ ಹಿಂದೆ ಪ್ರತಿದಿನ ಸುಮಾರು 2 ಲಕ್ಷ ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗುತ್ತಿತ್ತು. ಈಗ ಈ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ ಎಂದು ವರದಿಯಾಗಿದೆ. ಪರೀಕ್ಷೆ ಪ್ರಮಾಣ ಇಳಿಸುವ ಮೂಲಕ ಸರ್ಕಾರ ಮತ್ತೊಂದು ಕೊರೊನಾ ಅಲೆಯನ್ನು ಆಹ್ವಾನಿಸುತ್ತಿರುವಂತೆ ಕಾಣುತ್ತಿದೆ. ಪರೀಕ್ಷೆಯ ಪ್ರಮಾಣವನ್ನು ಕಡಿಮೆಗೊಳಿಸಿರುವುದು ಯಾವ ಕಾರಣಕ್ಕಾಗಿ ಎಂಬುದು ತಿಳಿಯುತ್ತಿಲ್ಲ. ಕೋವಿಡ್ ಪರೀಕ್ಷೆಗಳನ್ನು ಕಡಿಮೆ ಮಾಡಿದರೆ ಸೋಂಕು ಮತ್ತಷ್ಟು ವ್ಯಾಪಕವಾಗಿ ಹರಡುತ್ತದೆ ಎಂದು ತಜ್ಞರು ಹೇಳಿದ್ದರೂ ಆಡಳಿತಾರೂಢರು ಸಂವೇದನಾಶೀಲತೆಯನ್ನು ಕಳೆದುಕೊಂಡಿರುವುದು ಇದರಿಂದ ಸ್ಪಷ್ಟವಾಗುತ್ತದೆ.

ಪರೀಕ್ಷೆಯ ಪ್ರಮಾಣವನ್ನು ಕಡಿಮೆ ಮಾಡುವುದರಿಂದ ಸೋಂಕಿತರು ತಮಗೆ ಸೋಂಕುಂಟಾಗಿರುವುದರ ಅರಿವಿಲ್ಲದೆ ಇತರರಿಗೂ ಅದನ್ನು ಹರಡುತ್ತಾರೆ. ರಾಜ್ಯ ಕೋವಿಡ್-19 ತಾಂತ್ರಿಕ ಸಲಹಾ ಸಮಿತಿಯು ನಾಮಕಾವಾಸ್ತೆ ಎನ್ನುವ ರೀತಿಯಲ್ಲಿ ಇದೆ. ಪರೀಕ್ಷೆಗಳನ್ನು ಕಡಿಮೆ ಮಾಡುವುದರಿಂದ ಸರ್ಕಾರಕ್ಕೆ ವೆಚ್ಚವೇನೂ ಕಡಿಮೆ ಆಗುವುದಿಲ್ಲ. ಏಕೆಂದರೆ ಪರೀಕ್ಷೆ ಮಾಡಿಸದ ಕಾರಣ ಜನ ಸೋಂಕಿಗೆ ಒಳಗಾದರೆ ಸರ್ಕಾರ ಭರಿಸಬೇಕಾದ ವೆಚ್ಚ ದುಪ್ಪಟ್ಟು ಆಗುತ್ತದೆ. ಮತ್ತೊಂದೆಡೆ, ಕಳೆದುಹೋದ ಅಮೂಲ್ಯ ಜೀವಗಳಿಗೆ ಬೆಲೆ ಕಟ್ಟಲಾಗದು. ಇದನ್ನು ಆಡಳಿತಾರೂಢರು ಮನವರಿಕೆ ಮಾಡಿಕೊಳ್ಳಬೇಕು.

– ವಿಜಯಕುಮಾರ್ ಎಚ್.ಕೆ., ರಾಯಚೂರು

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.