ಮಂಗಳವಾರ, ಜನವರಿ 26, 2021
16 °C

ಭಿನ್ನ ಬೆಲೆಯ ಲಸಿಕೆಗಳು

ವಾಚಕರ ವಾಣಿ Updated:

ಅಕ್ಷರ ಗಾತ್ರ : | |

ಕೊರೊನಾ ತಡೆಗಟ್ಟುವ ಎರಡು ಲಸಿಕೆಗಳನ್ನು ಅಭಿವೃದ್ಧಿಪಡಿಸಿದ ಹೆಮ್ಮೆ ಭಾರತಕ್ಕಿದೆ. ಆದರೆ ಎರಡೂ ಲಸಿಕೆಗಳ ಬೆಲೆಯಲ್ಲಿ ಅಪಾರ ಅಂತರವಿದೆ. ಹಾಗೆಯೇ ಅವುಗಳ ಗುಣಮಟ್ಟದಲ್ಲೂ ಅಂತರ ಇದೆಯೇ ಎಂಬ ಭಾವನೆ ಜನರಲ್ಲಿ ಮೂಡುತ್ತಿದೆ.

ಕೋವಿಶೀಲ್ಡ್‌ ಎಂಬ ಲಸಿಕೆಯ ಬೆಲೆ ₹ 200 ಆದರೆ, ಅದೇ ಕೆಲಸ ಮಾಡುವ ಕೊವ್ಯಾಕ್ಸಿನ್ ಬೆಲೆ ₹ 295 ಇದೆ. ಬೆಂಗಳೂರಿಗೆ ಹೆಚ್ಚು ಬೆಲೆಯ ಕೊವ್ಯಾಕ್ಸಿನ್ ಹಾಗೂ ಬೆಳಗಾವಿಗೆ ಕಡಿಮೆ ಬೆಲೆಯ ಕೋವಿಶೀಲ್ಡ್‌ ಸರಬರಾಜು ಆಗುತ್ತಿದೆ. ಹೀಗೇಕೆ ಎಂಬುದನ್ನು ಸಂಬಂಧಪಟ್ಟವರು ದೃಢಪಡಿಸಬೇಕು. ಬೆಲೆಯಂತೆ ಗುಣಮಟ್ಟದಲ್ಲೂ ಹೆಚ್ಚು-ಕಡಿಮೆ ಇದೆಯೇ ಎಂಬುದನ್ನು ತಿಳಿಸಬೇಕು. ಎಲ್ಲವೂ ಸ್ಪಷ್ಟವಾಗಿದ್ದರೆ ಮಹಾಸಾಂಕ್ರಾಮಿಕವನ್ನು ತಡೆಗಟ್ಟಲು ಸುಲಭವಾಗುತ್ತದೆ.

- ಸುಭಾಸ ಯಾದವಾಡ, ವಿಜಯಪುರ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.