ಕ್ರಿಕೆಟ್ ಕ್ರೀಡಾ ಜಗತ್ತಿನಲ್ಲಿ ಜನಾಂಗೀಯ ನಿಂದನೆಯ ಪ್ರಕರಣಗಳು ಮರುಕಳಿಸುತ್ತಿರುವುದು ಕ್ರೀಡಾ ಸ್ಫೂರ್ತಿ ಹಾಗೂ ಸಮಾನತೆಯ ಮನೋಭಾವಕ್ಕೆ ಧಕ್ಕೆ ತರುವಂತಹದ್ದು. ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಇತ್ತೀಚೆಗೆ ಭಾರತೀಯ ಆಟಗಾರರನ್ನು ಅವಹೇಳನ ಮಾಡಿರುವುದು ಅಸಹ್ಯಕರ ಸಂಗತಿ.

ಕೋವಿಡ್ ಸಂಕಷ್ಟದ ನಂತರ ಕ್ರಿಕೆಟ್ ಚಟುವಟಿಕೆಗಳು ಗರಿಗೆದರುತ್ತಿರುವ ಸಂದರ್ಭದಲ್ಲಿ ಪ್ರೇಕ್ಷಕರು ಆಟಗಾರರಲ್ಲಿ ಮನಃಸ್ಥೈರ್ಯ ತುಂಬಬೇಕು. ಅದರ ಬದಲು ಹೀಗೆ ವರ್ತಿಸಿರುವುದು ವಿಪರ್ಯಾಸ. ಪ್ರೇಕ್ಷಕರ ಇಂತಹ ವರ್ತನೆಗಳ ವಿರುದ್ಧ ಐಸಿಸಿಯು ಕಠಿಣ ನಿಯಮ ರೂಪಿಸುವುದು ಅವಶ್ಯಕ. ಅದರಲ್ಲೂ ಮದ್ಯ, ನಶೆಯಂತಹ ಪದಾರ್ಥಗಳನ್ನು ಕ್ರೀಡಾಂಗಣದ ಒಳಕ್ಕೆ ತರುವುದು ಹಾಗೂ ಅಪರಾಧದ ಹಿನ್ನೆಲೆಯವರು ಬರುವುದನ್ನು ನಿಷೇಧಿಸಬೇಕು. ಕ್ರಿಕೆಟ್ ಆಯೋಜಿಸುವ ದೇಶಗಳು ಪಂದ್ಯದ ಆರಂಭದ ಮೊದಲು ಇಂತಹ ಸಂಗತಿಗಳ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ ಅಹಿತಕರ ಘಟನೆಗಳು ನಡೆಯದಂತೆ ಕಠಿಣ ನಿಯಮಗಳನ್ನು ರೂಪಿಸಿಕೊಳ್ಳಬೇಕು. ತಪ್ಪಿದಲ್ಲಿ ಆಯಾ ದೇಶದ ಕ್ರಿಕೆಟ್ ಮಂಡಳಿಯನ್ನೇ ಹೊಣೆ ಮಾಡುವಂತೆ ಆಗಬೇಕು.

- ಪೂಜಾ ಶಿರಮೋಜಿ,ಬೆಳಗಾವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.