ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸಾಪ ಚುನಾವಣೆ ಮುಂದೂಡದಿರಿ

Last Updated 22 ಏಪ್ರಿಲ್ 2021, 21:52 IST
ಅಕ್ಷರ ಗಾತ್ರ

ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಹಾಗೂ ಜಿಲ್ಲಾ ಘಟಕಗಳ ಅಧ್ಯಕ್ಷ ಸ್ಥಾನಗಳಿಗೆ ಮೇ 9ರಂದು
ನಡೆಯಲಿರುವ ಚುನಾವಣೆಯನ್ನು ಮುಂದೂಡುವ ಅಗತ್ಯವಿಲ್ಲ. ಈ ಚುನಾವಣೆ ದಿನಾಂಕದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಪರಿಷತ್ತಿನ ಕೇಂದ್ರ ಚುನಾವಣಾಧಿಕಾರಿ ಸ್ಪಷ್ಟಪಡಿಸಿರುವುದು ಸ್ವಾಗತಾರ್ಹ. ಆದರೂ ಕೆಲವರು ಕೋವಿಡ್ ಕಾರಣ ನೀಡಿ ಚುನಾವಣೆಯನ್ನು ಮುಂದೂಡಬೇಕೆಂಬ ಬೇಡಿಕೆ ಇಡುತ್ತಿರುವುದು
ಸಕಾರಣವಾಗಲಾರದು.

ಕೋವಿಡ್ ಜೊತೆಗೆ ಹೇಗೆ ಬದುಕಬೇಕೆಂಬುದನ್ನು ನಾವು ಕಲಿಯಬೇಕು ಎಂಬ ತಜ್ಞ ವೈದ್ಯರ ಮಾತು ನೂರಕ್ಕೆ ನೂರು ಸತ್ಯ. ಕೋವಿಡ್‌ನಿಂದ ನೋವು–ನಷ್ಟಗಳಿವೆ. ಆದರೆ ಲಾಕ್‍ಡೌನ್ ಮತ್ತು ಕರ್ಫ್ಯೂ ಬಹಳ ದಿನಗಳವರೆಗೆ ಮುಂದುವರಿದರೆ ನಾವು ಉಳಿಯುತ್ತೇವಾದರೂ ನಮ್ಮ ಬದುಕನ್ನೇ ಕಳೆದುಕೊಳ್ಳುವ ಭಯಾನಕ ಸತ್ಯದ ಸೂಚನೆ ಈಗಾಗಲೇ ನಮಗೆ ಸಿಕ್ಕಿದೆ. ಕೋವಿಡ್‍ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ನಮ್ಮ ಎಂದಿನ ಬದುಕಿಗೆ ತೆರೆದುಕೊಳ್ಳುವಂತೆ ಆಗಬೇಕು. ಲಾಕ್‌ಡೌನ್ ಸಂದರ್ಭದಲ್ಲಿ ಎಷ್ಟೋ ಬಡಜನರು ನರಕ ಅನುಭವಿಸಿದ್ದು ಎಲ್ಲರ ಅನುಭವಕ್ಕೆ ಬಂದಿದೆ. ಹೀಗಾಗಿ, ಪರಿಷತ್ತಿನ ಮತದಾರರನ್ನು ಕೋವಿಡ್ ನಿಯಮಪಾಲನೆಗೆ ಒಳಪಡಿಸಿ ಚುನಾವಣೆ ನಡೆಸುವುದು ಒಳ್ಳೆಯದು.

ಬೀರಣ್ಣ ನಾಯಕ ಮೊಗಟಾ, ಯಲ್ಲಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT