ಭಾನುವಾರ, ಏಪ್ರಿಲ್ 11, 2021
26 °C

ಚಾಲಕರೇ, ಎಚ್ಚರ... ಮಲೆನಾಡಿನ ರಸ್ತೆಗಳಲ್ಲಿ ಜೀವಿಗಳ ಜೀವ ತೆಗೆದೀರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಲೆನಾಡಿನ ರಸ್ತೆಗಳಲ್ಲಿ ವಾಹನ ಓಡಿಸುವಾಗ ಚಾಲಕರು ಈಗ ಅತ್ಯಂತ ಎಚ್ಚರಿಕೆಯಿಂದ ಇರುವುದು ಒಳಿತು.  ಕಪ್ಪೆ, ಹಾವಿನಂತಹ ಜೀವಿಗಳ ಸಂತಾನೋತ್ಪತ್ತಿಯ ಕಾಲ ಇದು. ಸಂಜೆಯ ವೇಳೆ ಇವು ಹೆಚ್ಚಿನ ಸಂಖ್ಯೆಯಲ್ಲಿ ಓಡಾಡುತ್ತವೆ. ಚಾಲಕರು ಇವನ್ನೆಲ್ಲ ಗಮನಿಸದೆ ವಾಹನ ಚಲಾಯಿಸಿದರೆ ಅವು ದೊಡ್ಡ ಪ್ರಮಾಣದಲ್ಲಿ ಸಾಯುತ್ತವೆ.  ರಾತ್ರಿ ವೇಳೆ ಮುಂದಿನ ಎರಡು ತಿಂಗಳ ಕಾಲ ಮೈಯೆಲ್ಲ ಕಣ್ಣಾಗಿಸಿಕೊಂಡು ವಾಹನ ಓಡಿಸಬೇಕು. ಮಲೆನಾಡು ಭಾಗದಲ್ಲಿ ಮಳೆಗಾಲದಲ್ಲಿ ಪ್ರವಾಸ ಚಟುವಟಿಕೆ ಕಡಿಮೆ ಇದ್ದಷ್ಟೂ ಒಳಿತು. ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ಜರುಗಿಸಬೇಕು. ಪ್ರವಾಸಿಗರ ವೈಯಕ್ತಿಕ ಸುರಕ್ಷೆ, ಸ್ಥಳೀಯರ ಅನುಕೂಲ ಹಾಗೂ ಪರಿಸರದ ರಕ್ಷಣೆಗೆ ಸ್ವಲ್ಪಮಟ್ಟಿಗಿನ ನಿರ್ಬಂಧ ಅಗತ್ಯ.

ಇದು, ಮೀನುಗಳ ಸಂತಾನೋತ್ಪತ್ತಿಯ ಕಾಲವೂ ಹೌದು. ಹಾಗಾಗಿ ಮೀನುಗಾರರು ಹೊಳೆಗಳಲ್ಲಿ ದೊಡ್ಡ ಮಟ್ಟದಲ್ಲಿ ಮೀನು ಹಿಡಿಯದಿರುವುದು ಒಳ್ಳೆಯದು. ಮುಂದೆಯೂ ಮೀನುಗಳು ಬೇಕಲ್ಲವೇ? ಅವು ಮೊಟ್ಟೆ ಇಡುವಾಗಲೇ ಹಿಡಿದುಬಿಟ್ಟರೆ! ಸಮುದ್ರದ ಮೀನುಗಾರಿಕೆಗೆ ಈ ಕಾರಣದಿಂದಲೇ ನಿರ್ಬಂಧ ಇದೆ. ಆದರೆ ಒಳನಾಡಿನ ಮೀನುಗಾರಿಕೆಗೆ, ವಿಶೇಷವಾಗಿ ಹೊಳೆಗಳಿಗೆ ನಿರ್ಬಂಧ ಇದ್ದಂತಿಲ್ಲ. ಜನಸಂಖ್ಯೆ ಮಿತಿಮೀರಿದೆ. ನಮ್ಮ ಹೊಟ್ಟೆ ತುಂಬಿಸಲು ಸಾಕಾಗುವಷ್ಟು ಜೀವಿಗಳು ಪರಿಸರದಲ್ಲಿ ಉಳಿದಿಲ್ಲ, ಜೊತೆಗೆ ಪರಿಸರ ನಾಶ. ಹಾಗಾಗಿ ಒಂದಿಷ್ಟು ಮಿತಿಗಳನ್ನು ನಾವೇ ಹಾಕಿಕೊಳ್ಳಲೇಬೇಕಾಗಿದೆ.

ಕೃಷಿಕ ಎ.ವಿ., ಶೃಂಗೇರಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು