ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣ ಯೋಧರನ್ನಾಗಿಸಲಿ

ಅಕ್ಷರ ಗಾತ್ರ

ಮೈಸೂರು ವಿಶ್ವವಿದ್ಯಾಲಯ ಇತ್ತೀಚೆಗೆ ಪ್ರಕಟಿಸಿರುವ ಕರ್ನಾಟಕ ರಾಜ್ಯ ಉಪನ್ಯಾಸಕರ ಅರ್ಹತಾ ಪರೀಕ್ಷೆಯಲ್ಲಿನ
ತೇರ್ಗಡೆಯ ಫಲಿತಾಂಶವನ್ನು ಗಮನಿಸಿದರೆ, ರಾಜ್ಯದ ಶಿಕ್ಷಣದ ಗುಣಮಟ್ಟ ಎಷ್ಟು ಕಳಪೆ ಎಂದು ಅನಿಸದೇ ಇರಲಾರದು. ಉಪನ್ಯಾಸಕರಾಗುವ ಕನಸು ಹೊತ್ತ ಎಷ್ಟೋ ಅಭ್ಯರ್ಥಿಗಳು ಅರ್ಹತಾ ಪರಿಕ್ಷೆಯಲ್ಲಿಯೇ ಮುಗ್ಗರಿಸಿದ್ದಾರೆ. ಇವರುಗಳನ್ನು ಕೆ-ಸೆಟ್ ಇಲ್ಲದೆ ಉಪನ್ಯಾಸಕರನ್ನಾಗಿ ನೇಮಕ ಮಾಡಿಕೊಂಡಿದ್ದೇ ಆದಲ್ಲಿ ವಿದ್ಯಾರ್ಥಿಗಳು ಇವರಿಂದ ಯಾವ ರೀತಿಯ ಗುಣಮಟ್ಟದ ಶಿಕ್ಷಣವನ್ನು ನಿರೀಕ್ಷಿಸಬಹುದು?

ಕಳಪೆ ಫಲಿತಾಂಶಕ್ಕೆ ಅಭ್ಯರ್ಥಿಗಳಷ್ಟೇ ಕಾರಣರಲ್ಲ. ಅವರಿಗೆ ಶಿಕ್ಷಣ ನೀಡಿದ ಕಾಲೇಜುಗಳೂ ಇದರ ಹೊಣೆ ಹೊರಬೇಕಾಗುತ್ತದೆ. ಕಾಲೇಜುಗಳು ಟೋಕನ್ ಪಡೆದು ತಿಂಡಿ ಕೊಡುವ ಹೋಟೆಲ್ ಉದ್ಯಮದಂತೆ, ಶುಲ್ಕ ಪಡೆದು ಡಿಗ್ರಿ ಸರ್ಟಿಫಿಕೇಟ್ ನೀಡುವ ಉದ್ಯಮವಾಗಬಾರದು. ಎಂತಹ ಕಠಿಣ ಪರೀಕ್ಷೆಗಳನ್ನೂ ಸುಲಲಿತವಾಗಿ ಜಯಿಸಬಲ್ಲ ಶಿಕ್ಷಣ ಯೋಧರನ್ನಾಗಿಸಲಿ.

- ಚಂದ್ರಶೇಖರ ಪುಟ್ಟಪ್ಪ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT