ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐನ್‌ಸ್ಟೀನ್‌ ಮಾತು ಈಗಲೇ ನಿಜವಾದಂತಿದೆ!

Last Updated 11 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ಜಾರ್ಖಂಡ್‌ನ ಹಜಾರಿಬಾಗ್‌ನಲ್ಲಿ ಗಾಂಧೀಜಿ ಪ್ರತಿಮೆ ವಿರೂಪ ಮಾಡಿರುವ ಸುದ್ದಿ ತಿಳಿದು ವ್ಯಸನವಾಯಿತು. ಇತ್ತೀಚೆಗೆ ಭಾರತೀಯರಿಗೆ ಅದರಲ್ಲೂ ರಾಜಕಾರಣಿಗಳಿಗೆ ಗಾಂಧೀಜಿ ವಿಚಾರಧಾರೆಗಳು ಅಪಥ್ಯವಾಗುತ್ತಿವೆ. ಗಾಂಧಿ ಬಗ್ಗೆ, ಸ್ವಾತಂತ್ರ್ಯ ಹೋರಾಟದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ‘ದೊಡ್ಡ’ವರಾಗಲು ಯತ್ನಿಸುತ್ತಿದ್ದಾರೆಯೇ ಎಂಬ ಸಂಶಯ ಮೂಡುತ್ತಿದೆ.

ದೇಶದಲ್ಲಿನ ಎಡ-ಬಲ ಪಂಥಗಳಿಗೆ ಗಾಂಧಿ ವಿಚಾರಗಳು ಬೇಕಾಗಿಲ್ಲ. ವಿದೇಶದ ಹಲವು ನಾಯಕರು ಗಾಂಧಿ ವಿಚಾರಗಳಿಂದ ಪ್ರಭಾವಿತರಾಗಿ ಒಳ್ಳೆಯ ನಾಯಕರಾಗಿದ್ದಾರೆ. ಹಲವು ದೇಶಗಳು ಗಾಂಧಿ ವಿಚಾರಗಳನ್ನು ಅಳವಡಿಸಿಕೊಂಡು ಅಭಿವೃದ್ಧಿ ಕಾಣುತ್ತಿವೆ. ನಮ್ಮ ದೇಶವನ್ನಾಳಿದ ಇಂಗ್ಲೆಂಡ್‌ನ ಜೊತೆಗೆ ಇತರ ದೇಶಗಳೂ ಗಾಂಧಿ ಪ್ರತಿಮೆ ಸ್ಥಾಪಿಸಿ ಗೌರವ ಸಲ್ಲಿಸಿವೆ. ‘ಅಹಿಂಸಾ ಮಾರ್ಗ ಹಿಡಿದಿದ್ದ ಮಹಾನ್ ಚೇತನ ಗಾಂಧಿ, ಒಂದು ಹಿಡಿ ಉಪ್ಪು ಹಿಡಿದು ಬ್ರಿಟಿಷ್ ಸರ್ಕಾರವೇ ನಡುಗುವಂತೆ ಮಾಡಿದ್ದರು. ಅಂತಹ ಮಹಾತ್ಮನೊಬ್ಬ ಈ ಭೂಮಿಯ ಮೇಲೆ ಬದುಕಿ ಮರೆಯಾದ ಎಂಬುದನ್ನು ಮುಂದಿನ ಪೀಳಿಗೆ ನಂಬಲು ಕಷ್ಟ’ ಎಂದಿದ್ದ ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೀನ್ ಅವರ ಮಾತು ಈಗಲೇ ಸತ್ಯವಾಗುತ್ತಿರುವಂತೆ ಅನಿಸುತ್ತಿದೆ.

ಸಿ.ಸಿದ್ದರಾಜು ಆಲಕೆರೆ,ಮಂಡ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT