ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಣಿಗಳ ಹೆಸರು ಬಳಸುವುದೇಕೆ?

Last Updated 12 ಏಪ್ರಿಲ್ 2019, 20:30 IST
ಅಕ್ಷರ ಗಾತ್ರ

ರಾಜಕಾರಣಿಗಳು ತಮ್ಮ ಎದುರಾಳಿಗಳನ್ನು ಬೈಯ್ಯಲು ಅಮಾಯಕ ಪ್ರಾಣಿಗಳನ್ನು ಎಗ್ಗಿಲ್ಲದೇಬಳಸುತ್ತಿದ್ದಾರೆ. ‘ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ’, ‘ಸತ್ತ ಕುದುರೆಗಳು’, ‘ತಾವೇ ಕಲ್ಲು ಹೊಡೆಸಿ ನಮ್ಮ ಮೇಲೆ ಗೂಬೆ ಕೂರಿಸ್ತಾರೆ’, ‘ಅವರು ಕಳ್ಳೆತ್ತು ಎಂದು ನನಗೆ ಮೊದಲೇ ಗೊತ್ತಿತ್ತು’... ಈ ರೀತಿ ಎದುರಾಳಿಗಳ ವಿರುದ್ಧದ ತಮ್ಮ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ.

ಡಿ.ವಿ.ಜಿ ಅವರು ತಮ್ಮ ಕವನವೊಂದರಲ್ಲಿ ‘ಹೊಟ್ಟೆತುಂಬಿದ ತೋಳ ಮಲಗೀತು; ನೀಂ ಪೆರರ ದಿಟ್ಟಿಸುತ ಕರಬುವೆಯೊ– ಮಂಕುತಿಮ್ಮ’ ಎನ್ನುತ್ತಾ, ಮನುಷ್ಯ ಅತ್ಯಂತ ಕೆಟ್ಟ ಪ್ರಾಣಿ ಎಂದು ಬಣ್ಣಿಸಿದ್ದಾರೆ. ಇನ್ನಾದರೂ ರಾಜಕಾರಣಿಗಳು ತಮ್ಮ ಎದುರಾಳಿಗಳನ್ನು ಹಳಿಯಲು ಯಾವುದೇ ಪ್ರಾಣಿಯನ್ನು ಬಳಸದಿರಲಿ (ಮನುಷ್ಯ ಪ್ರಾಣಿಯನ್ನು ಹೊರತುಪಡಿಸಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT