ಮಂಗಳವಾರ, ಅಕ್ಟೋಬರ್ 22, 2019
21 °C

ಒಂದು ವರ್ಗಕ್ಕೆ ಮನರಂಜನೆ

Published:
Updated:

ಹದಿನಾಲ್ಕು ತಿಂಗಳ ಕಾಲ ಒಟ್ಟಿಗೆ ಸರ್ಕಾರ ನಡೆಸಿದ ಜೆಡಿಎಸ್‌ ಮುಖಂಡ ಎಚ್‌.ಡಿ.ಕುಮಾರಸ್ವಾಮಿ ಮತ್ತು ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಅವರು, ಸರ್ಕಾರ ಉರುಳಿದ ಮೇಲೆ ಹಾವು– ಮುಂಗುಸಿಯಂತೆ ಕಚ್ಚಾಡುತ್ತಿದ್ದಾರೆ. ಇದರಿಂದ ಒಂದು ವರ್ಗಕ್ಕೆ ಮನರಂಜನೆ ಸಿಗಬಹುದು ಅಷ್ಟೆ. ಚುನಾವಣೆಗೆ ಮುಂಚೆ ಬದ್ಧವೈರಿಗಳಂತೆ ಕಾದಾಡಿ, ಚುನಾವಣೆಯ ನಂತರ ಒಗ್ಗೂಡಿ ಸರ್ಕಾರ ರಚಿಸಿದಾಗ, ಇದು ಹೆಚ್ಚುದಿನ ಬಾಳಿಕೆ ಬರುವುದಿಲ್ಲವೆಂಬುದು ಅಕ್ಷರ ಜ್ಞಾನವಿಲ್ಲದ ಸಾಮಾನ್ಯನಿಗೂ ಅರಿವಾಗಿತ್ತು.

ಆದರೆ ಇಂತಹ ಅರಿವು, ಹತ್ತಾರು ವರ್ಷಗಳ ರಾಜಕೀಯ ಅನುಭವ ಇರುವ ಈ ನಾಯಕರಿಗೆ ಇಲ್ಲದೆ ಹೋದದ್ದೇ ಇಂದಿನ ಸ್ಥಿತಿಗೆ ಕಾರಣ. ಅಧಿಕಾರ ಹೋದ ಮೇಲೆ ಗಿಣಿ, ಗಿಡುಗಗಳೆಂದು ಪರಸ್ಪರರನ್ನು ದೂರಿಕೊಂಡರೆ, ಸ್ವತಃ ನಗೆಪಾಟಲಿಗೆ ಈಡಾಗುತ್ತೇವೆ ಎಂಬ ಸತ್ಯವನ್ನು ಅವರು ಮರೆಯದಿರಲಿ.

ಯಲುವಹಳ್ಳಿ ಸೊಣ್ಣೇಗೌಡ, ಚಿಕ್ಕಬಳ್ಳಾಪುರ

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)