ಪಿಯು ಕಾಲೇಜುಗಳ ಮೇಲೆ ನಿಯಂತ್ರಣವಿರಲಿ

ಸೋಮವಾರ, ಏಪ್ರಿಲ್ 22, 2019
29 °C

ಪಿಯು ಕಾಲೇಜುಗಳ ಮೇಲೆ ನಿಯಂತ್ರಣವಿರಲಿ

Published:
Updated:

ಎಸ್.ಎಸ್.ಎಲ್.ಸಿ. ಪರೀಕ್ಷೆ ಮುಗಿಸಿದ ವಿದ್ಯಾರ್ಥಿಗಳಿಗೆ ಬೇರೆಯವರಂತೆ ನಿರಾಳವಾಗಿ ಬೇಸಿಗೆ ರಜೆ ಕಳೆಯುವ ಅವಕಾಶ ಇತ್ತೀಚೆಗೆ ತಪ್ಪಿಹೋಗಿದೆ. ಫಲಿತಾಂಶ ಬರಲು ಅನೇಕ ದಿನಗಳು ಇರುವಾಗಲೇ ಈ ಮಕ್ಕಳು ಪಿಯುಸಿ ಪ್ರಥಮ ವರ್ಷದ ಪ್ರವೇಶಕ್ಕಾಗಿ ‘ಪ್ರತಿಷ್ಠಿತ’ ಎನಿಸಿಕೊಂಡ ಪದವಿಪೂರ್ವ ಕಾಲೇಜುಗಳಲ್ಲಿ ನಡೆಸುವ ಪ್ರವೇಶ ಪರೀಕ್ಷೆಗಳಲ್ಲಿ ಉನ್ನತ ಶ್ರೇಣಿ ಗಳಿಸುವುದಕ್ಕಾಗಿ ಮತ್ತೆ ಹಗಲಿರುಳು ಅಭ್ಯಾಸ ಮಾಡಬೇಕು. ಈ ಪರೀಕ್ಷೆಗಳಿಗೆ ಸರ್ಕಾರದ ಅನುಮತಿ ಇದೆಯೇ? ಮಾರ್ಗಸೂಚಿಗಳೇನಾದರೂ ರೂಪುಗೊಂಡಿವೆಯೇ?  ಕನ್ನಡ ಹಾಗೂ ಇಂಗ್ಲಿಷ್‌ ಮಾಧ್ಯಮಗಳಲ್ಲಿ ಎಸ್.ಎಸ್.ಎಲ್.ಸಿ. ಓದಿದವರಿಗೆ ಪ್ರತ್ಯೇಕ ಪ್ರಶ್ನೆಪತ್ರಿಕೆಯ ಅವಶ್ಯಕತೆ ಇಲ್ಲವೇ? ಪೋಷಕರ ಇಂಥ ನೂರಾರು ಪ್ರಶ್ನೆಗಳಿಗೆ ಉತ್ತರ ದೊರೆತಿಲ್ಲ.

ಈ ಪ್ರವೇಶ ಪರೀಕ್ಷೆಗಳನ್ನು ನಡೆಸುವ ಮೊದಲು ಆಯಾ ಕಾಲೇಜುಗಳೇ ತಿಂಗಳುಗಟ್ಟಲೆ ತರಬೇತಿ ನೀಡುತ್ತವೆ. ತರಬೇತಿಯನ್ನು ಬ್ರಿಜ್ ಕೋರ್ಸ್‌ ಹೆಸರಿನಲ್ಲಿ ನಡೆಸಿ ಸಾವಿರಗಟ್ಟಲೆ ಶುಲ್ಕ ವಸೂಲಿ ಮಾಡಿಯೂ ಅದೇ ಕಾಲೇಜಿನಲ್ಲಿ ಸೀಟು ಸಿಗುವ ಭರವಸೆ ಇರುವುದಿಲ್ಲ. ಈ ಎಲ್ಲ ಕಾರಣಗಳಿಂದ, ಪಿಯುಸಿ ಪ್ರಥಮ ವರ್ಷದ ಕೋಚಿಂಗ್ ಮತ್ತು ಪ್ರವೇಶ ಪರೀಕ್ಷೆ ನಡೆಸುವ ಪದವಿ ಪೂರ್ವ ಕಾಲೇಜುಗಳ ಕ್ರಮವನ್ನು ಸರ್ಕಾರವು ಶಿಕ್ಷಣ ಕಾಯ್ದೆಯ ಅನುಸಾರ ನಿಯಂತ್ರಿಸಬೇಕಾದ ತುರ್ತು ಅನಿವಾರ್ಯ ಇದೆ.

–ಡಿ.ಎಂ.ನದಾಫ್, ಅಫಜಲಪುರ

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !