ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌಲ್ಯಮಾಪನ ವಿಕೇಂದ್ರೀಕೃತವಾಗಲಿ

Last Updated 20 ಏಪ್ರಿಲ್ 2021, 19:31 IST
ಅಕ್ಷರ ಗಾತ್ರ

ಪ್ರತಿವರ್ಷ ದ್ವಿತೀಯ ಪಿಯು ಮೌಲ್ಯಮಾಪನವು ಬೆಂಗಳೂರು, ಮಂಗಳೂರು, ಬೆಳಗಾವಿ, ಹುಬ್ಬಳ್ಳಿ ಮುಂತಾದ ಕೆಲವು ಕೇಂದ್ರಗಳಲ್ಲಿ ನಿಗದಿಯಾಗಿ, ಇತರ ಜಿಲ್ಲೆಗಳ ಉಪನ್ಯಾಸಕರು ಈ ಕೇಂದ್ರಗಳಿಗೆ ಹೋಗಬೇಕಾಗುತ್ತದೆ. ತಮ್ಮ ಅನಾರೋಗ್ಯ,ದಟ್ಟ ಬಿಸಿಲು, ವೈಯಕ್ತಿಕ ಸಮಸ್ಯೆಗಳು, ಸಂಸಾರದ ತಾಪತ್ರಯಗಳನ್ನು ಬದಿಗಿರಿಸಿ ಸುಮಾರು ಎರಡು ವಾರಕ್ಕೂ ಹೆಚ್ಚು ಕಾಲ ಮೌಲ್ಯಮಾಪನ ಕಾರ್ಯವನ್ನು ಉಪನ್ಯಾಸಕರು ಚಾಚೂ ತಪ್ಪದೆ ಮಾಡಿಕೊಂಡು ಬಂದಿದ್ದಾರೆ. ಈ ವರ್ಷ ಕೊರೊನಾ ವೈರಸ್ ಸೋಂಕಿನ ಕಾರಣದಿಂದ ಪರೀಕ್ಷಾ ಮೌಲ್ಯಮಾಪನ ಕೇಂದ್ರವು ಆಯಾ ಜಿಲ್ಲೆಗಳಲ್ಲೇ ಇರುವಂತೆ ನೋಡಿಕೊಳ್ಳುವುದು ಒಳ್ಳೆಯದು.

ಕಳೆದ ವರ್ಷ ಇದೇ ಕೊರೊನಾ ಕಾರಣದಿಂದ ಬಹುತೇಕ ಉಪನ್ಯಾಸಕರು ಮೌಲ್ಯಮಾಪನ ಕಾರ್ಯಕ್ಕೆ ಗೈರುಹಾಜರಾದದ್ದನ್ನು ಸ್ಮರಿಸಬಹುದು. ಜೊತೆಗೆ ಲಾಕ್‌ಡೌನ್ ಕಾರಣದಿಂದ ಬಾಕಿ ಉಳಿದಿದ್ದ ಇಂಗ್ಲಿಷ್ ಪರೀಕ್ಷೆಯ ಮೌಲ್ಯಮಾಪನ ಆಯಾ ಜಿಲ್ಲೆಗಳಲ್ಲಿ ಸುಸೂತ್ರವಾಗಿ, ಪಾರದರ್ಶಕವಾಗಿ ನಡೆದಿತ್ತು. ಇದು, ಆಯಾ ಜಿಲ್ಲೆಯಲ್ಲೇ ಮೌಲ್ಯಮಾಪನಕ್ಕೆ ಅವಕಾಶ ನೀಡಬೇಕೆಂಬ ಮನವಿಗೆ ಪುಷ್ಟಿ ನೀಡುತ್ತದೆ. ಇಂತಹ ಕ್ರಮದಿಂದ ಉಪನ್ಯಾಸಕರ ಹಿತವನ್ನು ಕಾಪಾಡಿದಂತೆ ಆಗುತ್ತದೆ.

- ಫಾಲ್ಗುಣ ಗೌಡ,ಅಚವೆ, ಅಂಕೋಲಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT